ನಾಗಶ್ರೀ ಮಿತ್ರ ವೃಂದ ಕಮ್ಮಾಜೆ: 2024-25 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಹಾಗೂ ವಾರ್ಷಿಕ ಸಭೆ
ಕೈಕಂಬ: ನಾಗಶ್ರೀ ಮಿತ್ರ ವೃಂದ (ರಿ ) ಕಮ್ಮಾಜೆ, ತೆಂಕಬೆಳ್ಳೂರು, ಬಂಟ್ವಾಳ ತಾಲ್ಲೂಕು, ಇದರ 2024-25 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಮೇ.20ರಂದು ಸೋಮವಾರ ತೆಂಕಬೆಳ್ಳೂರು ನಾಗಶ್ರೀ ಮಿತ್ರ ವೃಂದ ಕಮ್ಮಾಜೆಯ ವಿವೇಕ ಭವನದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಎಲ್ಲ ಸದಸ್ಯರ ಸಮ್ಮುಖದಲ್ಲಿ ನಡೆಯಿತು.
ಅದರಂತೆ ಗೌರವ ಮಾರ್ಗದರ್ಶಕರಾಗಿ ವಿವೇಕ ಚೈತ್ಯಾನ್ಯನoದ ಸ್ವಾಮೀಜಿ, ಗೌರವ ಅಧ್ಯಕ್ಷರಾಗಿ ಅನಂತರಾಮ ಹೇರಳ, ಅಧ್ಯಕ್ಷರಾಗಿ ರಾಮದಾಸ್ ಕಮ್ಮಾಜೆ, ಉಪಾಧ್ಯಕ್ಷರಾಗಿ ತಿರುಲೇಶ್ ಬೆಳ್ಳೂರು, ಪ್ರದಾನ ಕಾರ್ಯದರ್ಶಿಯಾಗಿ ತಿಮ್ಮಪ್ಪ ಕಮ್ಮಾಜೆ, ಜೊತೆ ಕಾರ್ಯದರ್ಶಿಯಾಗಿ ರಂಜಿತ್ ಧನುಪೂಜೆ, ಕೋಶಾಧಿಕಾರಿಯಾಗಿ ಪುಷ್ಪರಾಜ್ ಕಮ್ಮಾಜೆ, ಕ್ರೀಡಾ ಕಾರ್ಯದರ್ಶಿಯಾಗಿ ಲಿಖಿತ್ ರಾಜ್ ಕಮ್ಮಾಜೆ, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಲಕ್ಷ್ಮೀಶ ಕಮ್ಮಾಜೆ, ಸಂಘಟನಾ ಕಾರ್ಯದರ್ಶಿಯಾಗಿ ಪ್ರಮೋದ್ ಕಮ್ಮಾಜೆ, ತಿರುಮಲೇಶ್ ಕಮ್ಮಾಜೆ, ಮಹೇಂದ್ರ ಧನುಪೂಜೆ, ಲೋಹಿತ್ ಹೆಬ್ಬಾರಾಬೆಟ್ಟು, ಹರೀಶ್ ಮುಡೈಕೋಡಿ, ಪ್ರೀತಮ್ ಕಮ್ಮಾಜೆ, ಸಂದೀಪ್ ಕಮ್ಮಾಜೆ ಇವರು ಆಯ್ಕೆಯಾದರು.