ಅಪರಿಚಿತ ವಾಹನ ಡಿಕ್ಕಿ: ಕಾಡ ಹಂದಿ ಸಾವು
ಬಂಟ್ವಾಳ: ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಕಾಡಹಂದಿಯೊಂದು ಸಾವನ್ನಪ್ಪಿದ ಘಟನೆ ಕಾವಳಕಟ್ಟೆಯ ಎನ್.ಸಿ.ರೊಡ್ ಎಂಬಲ್ಲಿ ನಡೆದಿದ್ದು,ತಡವಾಗಿ ಬೆಳಕಿಗೆ ಬಂದಿದೆ.
ಸುಮಾರು 40 ಕೆ.ಜಿ.ತೂಕಹೊಂದಿರುವ ಗಂಡು ಕಾಡು ಹಂದಿ ಗುಡ್ಡದಿಂದ ಇಳಿದು ರಸ್ತೆ ದಾಟುವ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಶುಕ್ರವಾರದಂದು ಈ ಘಟನೆ ನಡೆದಿದ್ದು,ಸೋಮವಾರ ಬೆಳಕಿಗೆ ಬಂದಿದೆ.
ಹಂದಿ ಸಾವನ್ನಪ್ಪಿದ ಬಗ್ಗೆ ಸ್ಥಳೀಯರು ಬಂಟ್ವಾಳ ಅರಣ್ಯ ಇಲಾಖೆ ಹಾಗೂ ಪುಂಜಾಲಕಟ್ಟೆ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಬೇಟಿ ನೀಡಿದ ಬಂಟ್ವಾಳ ವಲಯ ಅರಣ್ಯಾಧಿಕಾರಿ ಪ್ರಪುಲ್ ಶೆಟ್ಟಿ ಮೃತ ಕಾಡುಹಂದಿಯನ್ನು ಮರಣೋತ್ತರ ಪರೀಕ್ಷೆಗಾಗಿ ವಗ್ಗ ದಲ್ಲಿರುವ ಪಶುವೈದ್ಯಾಲಯಕ್ಕೆ ಸ್ಥಳಾಂತರ ಮಾಡಿದ್ದಾರೆ.
ಇಲ್ಲಿನ ವೈದ್ಯಾಧಿಕಾರಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸ್ಥಳಕ್ಕೆ ಡಿ.ಆರ್.ಎಫ್.ಅನಿಲ್ ಅರಣ್ಯ ಇಲಾಖಾ ಸಿಬ್ಬಂದಿ ಲಕ್ಮೀನಾರಾಯಣ ಭೇಟಿ ನೀಡಿ ಪರಿಶೀಲಿಸಿದ್ದಾರೆ.