ಯಕ್ಷಧಾಮ ಬಡಗಬೆಳ್ಳೂರು ಇದರ ವಾರ್ಷಿಕ ಮಹಾಸಭೆ
ಕೈಕಂಬ: ಯಕ್ಷಕಲಾ ಸಂಘ ರಿಜಿಸ್ಟರ್ಡ್ ವರ ಕೋಡಿ ಯಕ್ಷಧಾಮ ಬಡಗಬೆಳ್ಳೂರು ಇದರ ವಾರ್ಷಿಕ ಮಹಾಸಭೆ ಮಾ.31 ಭಾನುವಾರ ಭೂಮಿಕಾ ಹಾಗೂ ಚಿಂತನ ಇವರ ಪ್ರಾರ್ಥನೆಯೊಂದಿಗೆ ಕೇಶವ ನಾಲಿಮಾರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ರಾಜ್ ಕಿರಣ್ ಮುಟ್ಟಿಕಲ್ ಪರಕೂರು, ಉಪಾಧ್ಯಕ್ಷರಾಗಿ ಸದಾಶಿವ ಕುಲಾಲ್, ಪ್ರಧಾನ ಕಾರ್ಯದರ್ಶಿಗಳಾಗಿ ಸುಧೀರ್ ಕಲ್ಲಗುಡ್ಡೆ, ಜೊತೆ ಕಾರ್ಯದರ್ಶಿಗಳಾಗಿ ಸತೀಶ್ ಆಚಾರ್ಯ, ಕೋಶಾಧಿಕಾರಿಗಳಾಗಿ ಪ್ರವೀಣ್ ಪರಕೂರು, ಕ್ರೀಡಾ ಕಾರ್ಯದರ್ಶಿಗಳಾಗಿ ಪುತ್ತುಬಾವ ವರಕೊಡಿ, ಜೊತೆ ಕ್ರೀಡಾ ಕಾರ್ಯದರ್ಶಿಗಳಾಗಿ ಶಂಕರ್ ನಾಲಿಮಾರ್ ಆಯ್ಕೆಗೊಂಡರು.
ನಿರ್ಗಮಿತ ಅಧ್ಯಕ್ಷ ಕೇಶವ ನಾಳಿಮಾರ್ ಮಾತನಾಡುತ್ತಾ ಕಳೆದ ಎರಡು ವರ್ಷಗಳಿಂದ ಸಹಕಾರ ನೀಡಿದ ಸರ್ವರಿಗೂ ಧನ್ಯವಾದ ಹೇಳಿದರು.
ಮುಂದೆಯೂ ಇದೇ ರೀತಿಯ ಸಹಕಾರ ನೂತನ ಸಮಿತಿಯ ಮೇಲೆ ಇರಲಿ ಎಂದು ನುಡಿದರು ಪದಗ್ರಹಣದ ಬಳಿಕ ನೂತನ ಅಧ್ಯಕ್ಷರಾದ ರಾಜಕಿರಣ್ ರವರು ಮಾತನಾಡಿ ಕಳೆದ 19 ವರ್ಷಗಳಿಂದ ಹೇಗೆ ಸಹಕಾರ ನೀಡುತ್ತಿದ್ದಿರೋ ಅದೇ ರೀತಿ ನಮ್ಮ ಸಮಿತಿಗೂ ನೀಡಿ ಎಂದು ಮನವಿ ಮಾಡಿ ಎಲ್ಲರಿಗೂ ವಂದಿಸಿದರು.
ಸದಸ್ಯರಾದ ಗಣೇಶ್ ಶೆಟ್ಟಿ ವರಕೋಡಿ ಇವರು ಲಘು ಉಪಹಾರದ ವ್ಯವಸ್ಥೆಯನ್ನು ಮಾಡಿದ್ದರು. ದಿನೇಶ್ ವರಕೋಡಿ ಇವರು ಸ್ವಾಗತಿಸಿ ವರದಿ ವಾಚಿಸಿ ಧನ್ಯವಾದ ಅರ್ಪಿಸಿದರು