“ಕಂಪ್ಯೂಟರ್ ಸ್ಕಿಲ್ ಟ್ರೈನಿಂಗ್ “
ಬಂಟ್ವಾಳ: ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಯ ವಿಜ್ಞಾನ ಸಂಘದ ವತಿಯಿಂದ ”ಮ್ಯಾಥ್ ಟ್ರಿಕ್ಸ್” ಮತ್ತು “ಕಂಪ್ಯೂಟರ್ ಸ್ಕಿಲ್ ಟ್ರೈನಿಂಗ್ “ ಕಾರ್ಯಗಾರವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಪುತ್ತೂರಿನ ಪ್ರಫುಲ್ಲ ಗಣೇಶ್ ಹಾಗೂ ಗಣೇಶ್ ಕೆ. ಮ್ಯಾಥ್ಯ್ ಟ್ರಿಕ್ಸ್ ಫಾರ್ ಕಾಂಪಿಟೇಟಿವ್ ಎಕ್ಸಾಂ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ಎಚ್.ಬಿ ರವರು ಮಾತನಾಡಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಿದರು.
ವಿಜ್ಞಾನ ಸಂಘದ ಸಂಚಾಲಕ ಡಾ.ಮಹೇಶ್ ಕೆ.ಬಿ., ಗಣಿತ ವಿಭಾಗದ ರೇಶ್ಮಾ ಕೆ ಎಸ್ , ಬಿಸಿಎ ಪ್ರತ್ಯುಷ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಕೆ. ರಶ್ಮಿತಾ ಉಪಸ್ಥಿತರಿದ್ದರು. ಪ್ರೊ.ಶುಭಾ ಕೆ ಸ್ವಾಗತಿಸಿದರು. ಪ್ರೊ.ಲಕ್ಷ್ಮೀನಾರಾಯಣ ಕೆ ಅವರು ವಂದಿಸಿದರು.