ಮಾ.2 ರಂದು “ಬಂಟ್ವಾಳ ಕಂಬಳ”
ಬಂಟ್ಚಾಳ: ಮೂಡೂರು- ಪಡೂರು ಜೋಡುಕರೆ ಕಂಬಳ ಸಮಿತಿ ವತಿಯಿಂದ 13ನೇ ವರ್ಷದ “ಬಂಟ್ವಾಳ ಕಂಬಳ” ಹಲವು ವೈಶಿಷ್ಠ್ಯತೆಗಳೊಂದಿಗೆ ಮಾ.2 ರಂದು ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಕೂಡಿಬೈಲ್ ನಲ್ಲಿ ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷರು,ಮಾಜಿ ಸಚಿವರಾದ ಬಿ.ರಮಾನಾಥ ರೈ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ಮಂಗಳವಾರ ಆಮಂತ್ರಣಪತ್ರ ಬಿಡುಗಡೆಗೊಳಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕಾವಳ ಕಟ್ಟೆಯಲ್ಲಿ 10 ವರ್ಷ ನಡೆದಿದ್ದ ಈ ಕಂಬಳವು ಹೊಸ ಆವಿಷ್ಕಾರಗಳಿಂದಲೇ ಗುರುತಿಸಿಕೊಂಡಿತ್ತು.
ಇದೀಗ ಮೂರು ವರ್ಷಗಳಿಂದ ನಾವೂರು ಗ್ರಾಮದ ಕೂಡಿಬೈಲು ಗದ್ದೆಯಲ್ಲಿ ನಡೆಸಲಾಗುತ್ತಿದೆ.ಇಲ್ಲಿ ಕಂಬಳ ವೀಕ್ಷೇಣೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತ್ಯೇಕ ವಿ.ಐ.ಪಿ ಗ್ಯಾಲರಿಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಕಂಬಳ ಉಳಿಸಿ ಬೆಳೆಸುವಲ್ಲಿ ಕಾನೂನು ಹೋರಾಟ ನಡೆಸಿ, ಮಹಿಳೆಯರು ಕೂಡಾ ಕಂಬಳ ವೀಕ್ಷಿಸಲು ಪ್ರತ್ಯೇಕ ಗ್ಯಾಲರಿ ಅಳವಡಿಕೆ, ಸಿನೆಮಾ ತಾರೆಯರು ಮತ್ತು ಗಣ್ಯರು ಭಾಗವಹಿಸುವ ಮೂಲಕ ಕಂಬಳಕ್ಕೆ ಹೊಸ ರೂಪ ಕೊಟ್ಟ ಹೆಗ್ಗಳಿಕೆ ಮೂಡೂರು-ಪಡೂರು ಕಂಬಳ ಕೂಟಕ್ಕೆ ಸಲ್ಲುತ್ತದೆ ಎಂದರು.
13 ನೇ ವರ್ಷದ ‘ಬಂಟ್ವಾಳ ಕಂಬಳ’ವನ್ನು ಸೋಲೂರು ಆರ್ಯ ಈಡಿಗ ಮಹಾ ಸಂಸ್ಥಾನ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ ಉದ್ಘಾಟಿಸಲಿದ್ದು, ಅಳದಂಗಡಿ ಅರಮನೆ ತಿಮ್ಮಣ್ಣರಸ, ಡಾ. ಪದ್ಮಪ್ರಸಾದ ಅಜಿಲ, ಅಲ್ಲಿಪಾದೆ ಸಂತ ಅಂತೋನಿ ಚಚ್೯ ನ ಧರ್ಮಗುರು ಫೆಡ್ರಿಕ್ ಮೊಂತೆರೋ ಮತ್ತಿತರ ಗಣ್ಯರು ಉಪಸ್ಥಿತರಿರುವರು ಎಂದರು.
ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್, ಗೃಹಸಚಿವ ಡಾ.ಜಿ.ಪರಮೇಶ್ವರ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ, ಮೀನುಗಾರಿಕೆ ಸಚಿವ ಮಂಕಾಳ ಎಸ್.ವೈದ್ಯ, ಇಂದನ ಸಚಿವ ಕೆ.ಜೆ.ಜಾಜ್ರ್ , ಸಹಕಾರ ಸಚಿವ ಕೆ.ಎನ್.ರಾಜಣ್ಣ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ , ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್, ಸಂಸದ ಡಿ.ಕೆ.ಸುರೇಶ್, ಬೆಂಗಳೂರು ಅಭಿವರದ್ಧಿ ಪ್ರಾಧಿಕಾರ ಅಧ್ಯಕ್ಷ ಎನ್.ಎ.ಹ್ಯಾರಿಸ್, ಇಂಧನ ನಿಗಮ ಅಧ್ಯಕ್ಷ ಟಿ.ಡಿ.ರಾಜೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದ ರಾಜ್, ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಐಕಳಬಾವ ಸಹಿತ ಹಲವಾರು ಗಣ್ಯರು ಭಾಗವಹಿಸುವರು ಎಂದು ಅವರು ವಿವರಿಸಿದರು.
ಎರಡು ಪವನ್ ಚಿನ್ನ ಬಹುಮಾನ: ಈ ಬಾರಿ ಹಗ್ಗ ಹಿರಿಯ ಮತ್ತು ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಗೆದ್ದ ಕೋಣಗಳ ಮಾಲೀಕರಿಗೆ ಎರಡು ಪವನ್ ಚಿನ್ನದ ಪದಕ ಮತ್ತು ದ್ವಿತೀಯ ಸ್ಥಾನಕ್ಕೆ ಒಂದು ಪವನ್ ಚಿನ್ನದ ಪದಕ ನೀಡಲಾಗುವುದು ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೀವ ಶೆಟ್ಟಿ ಎಡ್ತೂರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್, ಸಂಚಾಲಕ ಬಿ.ಪದ್ಮಶೇಖರ ಜೈನ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ, ಕೋಶಾಧಿಕಾರಿ ಫಿಲಿಪ್ ಫ್ರಾಂಕ್, ಉಪಾಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸುದರ್ಶನ್ ಜೈನ್, ಕೆ.ಮಾಯಿಲಪ್ಪ ಸಾಲ್ಯಾನ್, ಎಂ.ಎಸ್.ಮಹಮ್ಮದ್, ಪ್ರಮುಖರಾದ ರಾಜೇಶ ರೋಡ್ರಿಗಸ್, ಸುಭಾಶ್ಚಂದ್ರ ರೈ ಕುಳಾಲು, ಪ್ರವೀಣ ರೋಡ್ರಿಗಸ್, ಶಬೀರ್ ಸಿದ್ಧಕಟ್ಟೆ, ಜನಾರ್ದನ ಚೆಂಡ್ತಿಮಾರ್, ಉಮೇಶ ಕುಲಾಲ್, ಸಂದೇಶ ಶೆಟ್ಟಿ, ಪ್ರಶಾಂತ್ ಕುಲಾಲ್, ಪ್ರಕಾಶ ಆಳ್ವ, ಲೆಸ್ಟರ್ ರೋಡ್ರಿಗಸ್, ವೆಂಕಪ್ಪ ಪೂಜಾರಿ, ಮಂಜುಳಾ ಕುಶಲ, ಸೀತಾರಾಮ ಶಾಂತಿ ಮತ್ತಿತರರು ಇದ್ದರು.