ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಶ್ರೀ ವಿದ್ಯಾಗಣಪತಿ ದೇವರ ಶಿಲಾನ್ಯಾಸದ ನಿಮಿತ್ತ ಬುಧವಾರ ಆಗಮಿಸಿದ್ದ ಅವಧೂತ ಶ್ರೀ ವಿನಯ್ ಗುರೂಜಿ ಗೌರಿಗದ್ದೆ ಅವರು ಬಳಿಕ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೂ ಭೇಟಿ ನೀಡಿದರು.

ಶಾಲೆಯ ಚಟುವಟಿಕೆಯನ್ನು ವೀಕ್ಷಿಸಿ ನಂತರ ವೇದವ್ಯಾಸ ಧ್ಯಾನಮಂದಿರದಲ್ಲಿ ಶ್ರೀರಾಮನಿಗೆ ದೀಪ ಬೆಳಗಿಸಿ, ಅಗ್ನಿಹೋತ್ರಕ್ಕೆ ಘೃತಾಹುತಿ ನೀಡಿ ಶ್ರೀ ರಾಮನಾಮ ತಾರಕ ಜಪ ಹಾಗೂ ಸರಸ್ಪತಿ ವಂದನೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಆರ್ಶೀವಚನ ನೀಡಿದರು.

ಈ ಸಂದರ್ಭದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ, ಶಿರಸಿಯ ಉದ್ಯಮಿ, ಸಾಮಾಜಿಕ ಹೋರಾಟಗಾರರಾದ ಶ್ರೀ ಅನಂತಮೂರ್ತಿ ಹೆಗಡೆ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಹೈಕೋರ್ಟ್ ನ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್, ಆರ್ಥಿಕ ತಜ್ಞೆಯಾದ  ದಿವ್ಯ ಪಾದೆಕಲ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *