ಫೆ.17 ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟ: ಆಮಂತ್ರಣ ಪತ್ರ ಬಿಡುಗಡೆ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ನೇತೃತ್ವದಲ್ಲಿ ಬಂಟ್ವಾಳ ತಾಲೂಕು ವಾಲಿಬಾಲ್ ಎಸೋಸಿಯೇಷನ್, ಯೂತ್ ಬಂಟ್ಸ್ ಬಂಟ್ವಾಳ ತಾಲೂಕು ಹಾಗೂ ಯೂತ್ ಬಂಟ್ಸ್ ಬಿ.ಸಿ.ರೋಡು ಇದರ ಸಂಯುಕ್ತಾಶ್ರಯದಲ್ಲಿ ಬಿ.ಸಿ.ರೋಡು ಸಮೀಪದ ಬ್ರಹ್ಮರಕೊಟ್ಲು ಬಳಿ ಇರುವ ಕ್ರೀಡಾಂಗಣದಲ್ಲಿ ಫೆ.17 ರಂದು ನಡೆಯಲಿರುವ ಪುರುಷರ ಮತ್ತು ಮಹಿಳೆಯರ ಜಿಲ್ಲಾ ಮಟ್ಟದ ಬಾಲಿಬಾಲ್ ಪಂದ್ಯಾಟದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಭವನದಲ್ಲಿ ನಡೆಯಿತು.
ಹೋಟೆಲ್ ರಂಗೋಲಿ ಮಾಲಕರಾದ ಸದಾನಂದ ಶೆಟ್ಟಿ ಅವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಸತೀಶ್ ಬಪ್ಪಲಿಗೆ, ತಾಲೂಕು ವಾಲಿಬಾಲ್ ಅಸೋಸೊಯೇಶನ್ ಗೌರವಾಧ್ಯಕ್ಷ ಶ್ರೀಕಾಂತ ಶೆಟ್ಟಿ, ಸಂಕೇಶ ಉಪಸ್ಥಿತರಿದ್ದರು.
ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಶಂಕರ್ ಶೆಟ್ಟಿ ಪರಾರಿಗುತ್ತು, ಯೂತ್ ಬಂಟ್ಸ್ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ನಿಶಾನ್ ಆಳ್ವ, ಯೂತ್ ಬಂಟ್ಸ್ ಬಿ.ಸಿ.ರೋಡ್ ಇದರ ಅಧ್ಯಕ್ಷರಾದ ಭವಿಷ್ ಶೆಟ್ಟಿ ಕೋಡಿಬೆಟ್ಟು, ಬಂಟ್ವಾಳ ತಾಲೂಕು ವಾಲಿಬಾಲ್ ಎಸೋಸಿಯೇಷನ್ ಅಧ್ಯಕ್ಷರಾದ ಸುಪ್ರೀತ್ ಆಳ್ವ ಪೊನ್ನೋಡಿ ಮತ್ತಿತರರು ಭಾಗವಹಿಸಿದ್ದರು.
ಬಂಟ್ವಾಳ ತಾಲೂಕು ರೆಫ್ರಿ ಬೋರ್ಡ್ ಮುಖ್ಯಸ್ಥ ಜಗದೀಶ್ ರೈ. ಬಿ. ಪ್ರಸ್ತಾವನೆಗೈದರು.
ಬಂಟ್ವಾಳ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಬಂಟ್ವಾಳ ಸ್ವಾಗತಿಸಿದರು. ಶ್ರೀ ಸಾಯಿರಾಮ್ ಜೆ ನಾಯಕ್ ವಂದಿಸಿದರು.