ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶದ ಒಂಭತ್ತನೇಯ ದಿನದಂದು ಸನ್ಮಾನ ಸಮಾರಂಭ
ಕೈಕಂಬ: ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶದ ಒಂಭತ್ತನೇಯ ದಿನ ಜ.29ರಂದು ಸೋಮವಾರ ಅಮ್ಮುಂಜೆಗುತ್ತು ಕೃಷ್ಣ ಕುಮಾರ್ ಪೂಂಜ, ಅಮ್ಮುಂಜೆಗುತ್ತು ಸತ್ಯಪ್ರಸಾದ್ ಶೆಟ್ಟಿ ಹಾಗೂ ಅಮ್ಮುಂಜೆಗುತ್ತು ಲಕ್ಷ್ಮಿ ಪ್ರಸಾದ್ ಶೆಟ್ಟಿ ಯವರರಿಗೆ ಶಾಲು ಹೊದೆಸಿ, ಫಲ, ಪುಷ್ಪಗಳೊಂದಿಗೆ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಕೊಂಜಾಲುಗುತ್ತು ದಿವಾಕರ ಶೆಟ್ಟಿ, ಅಮ್ಮುಂಜೆಗುತ್ತು ಯಶೋದಾ ಡಿ. ಶೆಟ್ಟಿ, ಅಮ್ಮುಂಜೆಗುತ್ತು ಡಾ. ಮಂಜಯ್ಯ ಶೆಟ್ಟಿ, ಅಮುಂಜೆಗುತ್ತು ಸಂತೋಷ್ ಶೆಟ್ಟಿ, ಅಮುಂಜೆಗುತ್ತು ರಂಗನಾಥ್ ಶೆಟ್ಟಿ, ಅಮುಂಜೆಗುತ್ತು ರವೀಂದ್ರ ಶೆಟ್ಟಿ, ದಕ್ಷರಾಜ್ ಶೆಟ್ಟಿ ಅಮುಂಜೆಗುತ್ತು, ಸುದೇಶ್ ರೈ ಬಾರಿಂಜೆ, ಸಂಪತ್ ಕುಮಾರ್ ಶೆಟ್ಟಿ, ದೇವದಾಸ್ ಹೆಗ್ಡೆ ಅಮುಂಜೆಗುತ್ತು, ನಿಕ್ಷಾ ನಾಯ್ಕ್ ಅಮುಂಜೆಗುತ್ತು, ಅಮುಂಜೆಗುತ್ತು ಪ್ರಫುಲ್ಲ ವಿ. ಶೆಟ್ಟಿ, ಅಮುಂಜೆಗುತ್ತು ಜ್ಯೋತಿ ಎ. ಶೆಟ್ಟಿ, ಅಮುಂಜೆಗುತ್ತು ನಾಗವೇಣಿ ಡಿ. ಶೆಟ್ಟಿ, ಅಮುಂಜೆಗುತ್ತು ವನಿತಾ ಎಸ್. ರೈ, ರಕ್ಷಾ ಮಲ್ಲಿ ಅಮುಂಜೆಗುತ್ತು ಉಪಸ್ಥಿತರಿದ್ದರು.


ಪ್ರಸಾದ್ ಕುಮಾರ್ ಸನ್ಮಾನ ಪತ್ರ ವಾಚಿಸಿದರು. ಜನಾರ್ಧನ್ ಅಮ್ಮುಂಜೆ ಸ್ವಾಗತಿಸಿ, ವಂದಿಸಿದರು.

