ಅಡ್ಡೂರು ಬರ್ಕೆ ಕುಟುಂಬಸ್ಥರ ತರವಾಡು ಮನೆಯಲ್ಲಿ ಪರಿವಾರ ದೈವಗಳ ಕೋಲೋತ್ಸವ
ಕೈಕಂಬ: ಅಡ್ಡೂರು ಬರ್ಕೆ ದುಗ್ಗಮ್ಮ ಕುಟುಂಬಸ್ಥರ ತರವಾಡು ಮನೆಯಲ್ಲಿ ಜ.30ರಂದು ಮಂಗಳವಾರ ಹಾಗೂ 31 ಬುಧವಾರದಂದು ಪರಿವಾರ ದೈವಗಳ ಕೋಲೋತ್ಸವ ಹಾಗೂ ವಾರ್ಷಿಕ ಅಗೇಲು ಸೇವೆ ನಡೆಯಿತು.
ಸತ್ಯದೇವತೆ, ಹಿರಿಯಜ್ಜ, ಮಂತ್ರದೇವದೆ, ಕಲ್ಲುರ್ಟಿ, ಕುಟುಂಬದ ಕಲ್ಲುರ್ಟಿ ಪಂಜುರ್ಲಿ ಹಾಗೂ ರಾಹು ಗುಳಿಗ ದೈವಗಳ ಕೋಲೋತ್ಸವ ನೆರವೇರಿತು.
ಅಡ್ಡೂರು ಬರ್ಕೆಮನೆ ದೈವ ದೇವರ ರಿಲಿಜಿಯಸ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗಣೇಶ್ ಪ್ರಸಾದ್ ಜೆ. ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಭಟ್ಟಾಜೆ, ಉಪಾಧ್ಯಕ್ಷ ಆನಂದ ಪಚ್ಚನಾಡಿ, ಕಾರ್ಯದರ್ಶಿ ಜಗದೀಶ್ ಕುಚ್ಚೂರು, ಜೊತೆ ಕಾರ್ಯದರ್ಶಿ ಪ್ರಕಾಶ್ ಮಿಜಾರ್, ಕೋಶಾಧಿಕಾರಿ ಗಂಗಾಧರ ಬಜಾಲ್, ಜೊತೆ ಕೋಶಾಧಿಕಾರಿ ಸುವಾನ್ ಕರ್ಕೇರ ಉಜ್ಜೋಡಿ, ಉಮೇಶ್ ನೀರುಮಾರ್ಗ, ಮಹಾಬಲ ಬರ್ಕೆ, ಧರ್ಮಣ ಉಪ್ಪುಗೋಡು, ಲೋಕಯ್ಯ ಮೇರೆಮಜಲು, ಆನಂದ ಕರಿಯಂಗಳ, ಗೋಪಾಲ ಅಮ್ಮುಂಜೆ, ಸೀತಾರಾಮ ಬಡಕಬೈಲು ಹಾಗೂ ಅಡ್ಡೂರು ಬರ್ಕೆ ಮನೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.