ಫೆ. ೪ರಂದು ಕೆಪಿಟಿ ಕದ್ರಿಯಲ್ಲಿ ದ.ಕ ಜಿಲ್ಲಾ ಮರಾಠಿ ಕ್ರೀಡೋತ್ಸವ
ಕೈಕಂಬ: ದ.ಕ ಜಿಲ್ಲಾ ಮರಾಟಿ ಸಮಾಜ ಸಂಘ(ರಿ) ಮಂಗಳೂರು ಹಾಗೂ ಮರಾಟಿ ವೇದಿಕೆ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಫೆ. ೪ರಂದು ಕೆಪಿಟಿಯ ಕದ್ರಿ ಕ್ರೀಡಾಂಗಣದಲ್ಲಿ ಸಮಾಜದ ಕ್ರೀಡೋತ್ಸವ ಜರುಗಲಿದೆ.
ದ.ಕ ಜಿಲ್ಲಾ ಮರಾಟಿ ಸಮಾಜ ಸಂಘದ ಅಧ್ಯಕ್ಷ ರವಿಪ್ರಸಾದ್ ನಾಯ್ಕ್ ಕಯ್ಯಾರು ಅಧ್ಯಕ್ಷತೆ ವಹಿಸಿಲಿದ್ದಾರೆ. ಕೆಪಿಟಿ ಪ್ರಾಂಶುಪಾಲ ಹರೀಶ್ ಶೆಟ್ಟಿ ಕ್ರೀಡೋತ್ಸವ ಉದ್ಘಾಟಿಸಲಿದ್ದಾರೆ. ಆದಾಯ ತೆರಿಗೆ ಇಲಾಖೆಯ ನಿವೃತ್ತ ಆಯುಕ್ತ ಕೆ. ಎ. ಚಂದ್ರಕುಮಾರ್, ಬಿಎಸ್ಸೆನ್ನೆಲ್ ನಿವೃತ್ತ ಡಿಜಿಎಂ ಬಿ. ರಾಮ ನಾಯ್ಕ್, ಕೇಂದ್ರ ಸರ್ಕಾರದ ಕೃಷಿ ಸಂಶೋಧನಾ ಇಲಾಖೆಯ ನಿವೃತ್ತ ನಿರ್ದೇಶಕ ಡಾ. ಬಿ. ಜಿ. ನಾಯ್ಕ್ ಭಾಗವಹಿಸಲಿದ್ದಾರೆ.
ಸ್ಪರ್ಧೆಗಳ ವಿವರ: ಮಕ್ಕಳಿಗೆ ಮತ್ತು ಪುರುಷರಿಗೆ(೫ರಿಂದ ೬೦ರವರೆಗೆ) ಓಟ, ಚೆಂಡು ಎಸೆತ, ಗುಂಡು ಎಸೆತ, ಬಾಲ್ ಎಸೆತ, ಲಿಂಬೆ ಚಮಚ ಓಟ ಮತ್ತು ೬೦ ದಾಟಿದವರಿಗೆ ವೇಗ ನಡಿಗೆ, ಗುಂಡು ಎಸೆತ, ಬಾಲ್ ಎಸೆತ, ಪುರುಷರಿಗೆ ವಾಲಿಬಾಲ್, ಕ್ರಿಕೆಟ್ ಹಾಗೂ ಮಹಿಳೆಯರಿಗೆ ತ್ರೋ ಬಾಲ್ ಮತ್ತು ಸಂಗೀತ ಕುರ್ಚಿ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಮರಾಟಿ ಸಂಘದ ಪ್ರಕಟಣೆ ತಿಳಿಸಿದೆ.