ಅಡ್ಡೂರು ಬರ್ಕೆ ಮನೆ ಕುಟುಂಬಸ್ಥರ ತರವಾಡಿನ ಕೋಲೋತ್ಸವ
ಕೈಕಂಬ: ಅಡ್ಡೂರು ಬರ್ಕೆ ಮನೆ ಕುಟುಂಬಸ್ಥರ ತರವಾಡಿನಲ್ಲಿ ೨೦೨೪ ಜ.೩೦ರಂದು ಮಂಗಳವಾರದಿಂದ ಜ.೩೧ ಬುಧವಾರದವರೆಗೆ ಕುಟುಂಬಸ್ಥರು ಆರಾಧಿಸಿಕೊಂಡು ಬರುತ್ತಿರುವಂತಹ ಸತ್ಯದೇವತೆ ಮತ್ತು ಕುಪ್ಪೆಟ್ಟು ದೈವ ಹಾಗೂ ಕುಟುಂಬದ ರಾಹು ದೈವದ ಕೋಲೋತ್ಸವ ನಡೆಯಲಿದೆ.
ವಿಶೇಷವಾಗಿ ಕಳೆದ ಬಾರಿ ನಡೆದ ಕೋಲೋತ್ಸವದಲ್ಲಿ ಕುಪ್ಪೆಟ್ಟು ಪಂಜುರ್ಲಿ ನುಡಿದ ವಾಕ್ಯದ ಪ್ರಕಾರ ಈ ಬಾರಿ ಕುಟುಂಬದ ಸದಸ್ಯರು ಸೇರಿ ಒಮ್ಮತದಿಂದ ನಿರ್ಣಯ ಮಾಡಿದ ಪ್ರಕಾರ ಕುಪ್ಪೆಟ್ಟು ದೈವಕ್ಕೆ ದೊಂದಿ ಬೆಳಕಿನೊಂದಿಗೆ “ದರಿ” ನೇಮೋತ್ಸವ ನಡೆಯಲಿದೆ .