ಸಮಾಜ ಸಂಘಟನೆಗಾಗಿ ಉಚಿತವಾಗಿ ನಿರಂತರ ಶಿಕ್ಷಣ ನೀಡುತ್ತಿರುವುದು ರಾಜ್ಯದಲ್ಲೇ ಪ್ರಥಮ : ಲಕ್ಷ್ಮಣ್ ಅಗ್ರಬೈಲು
ಬಂಟ್ವಾಳ: ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಸಮಾಜ ಸಂಘಟನೆಗಾಗಿ ಮಕ್ಕಳಿಗೆ ಮತ್ತು ಸಮಾಜ ಬಾಂಧವರಿಗೆ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತವಾಗಿ ತರಬೇತಿ ನೀಡುತ್ತಿರುವುದು ಕುಲಾಲ ಸಮುದಾಯದಲ್ಲಿ ರಾಜ್ಯದಲ್ಲೇ ಪ್ರಥಮ ಎಂದು ಲಕ್ಷ್ಮಣ ಅಗ್ರಬೈಲು ತಿಳಿಸಿದ್ದಾರೆ.

ಅವರು ಆದಿತ್ಯವಾರ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ವತಿಯಿಂದ ನಡೆದ ಕಲಾವಳಿ 2024ರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಪ್ರದರ್ಶನ ನೀಡಿದ ಕುಲಾಲ ಸೇವಾದಳದ ಚೈತನ್ಯ ನಿರಂತರ ತರಬೇತಿ ಪಡೆಯುತ್ತಿರುವ ಮಕ್ಕಳಿಗೆ ಅಭಿನಂದನೆ ನೆರವೇರಿಸಿ ನಂತರ ಮಾತನಾಡಿ ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರಯುತ ಶಿಕ್ಷಣ ಸಿಗಬೇಕು.
ಬಂಟ್ವಾಳ ಕುಲಾಲ ಸೇವಾದಳದ ಚೈತನ್ಯ ನಿರಂತರ ತರಬೇತಿಯಿಂದ ಮಕ್ಕಳಿಗೆ ಹೊಸ ಚೈತನ್ಯ ಸಿಕ್ಕಿದಂತಾಗಿದೆ. ಚಿತ್ರಕಲೆ, ಡ್ಯಾನ್ಸ್, ಯಕ್ಷಗಾನ, ಯೋಗ, ನಾಯಕತ್ವ, ಶಿಕ್ಷಣ ಮಾಹಿತಿ, ನೃತ್ಯ ಭಜನೆ, ಆರೋಗ್ಯ ಮಾಹಿತಿಯ ಜೊತೆಗೆ ಶ್ಲೋಕ ಪಠಣವನ್ನೂ ನಡೆಸಿಕೊಂಡು ಬಂದರೆ ಮತ್ತಷ್ಟೂ ಮಕ್ಕಳು ಧಾರ್ಮಿಕತೆಯ ಬಗ್ಗೆ ಮಾಹಿತಿ ತಿಳಿದಂತಾಗುತ್ತದೆ ಎಂದು ತಿಳಿಸಿದರು.
ದಳಪತಿ ರಾಜೇಶ್ ಕುಮಾರ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ವೈಷ್ಣವಿ ವೈ.ಕೆ. ಕಾರ್ಯಕ್ರಮ ನಿರೂಪಿಸಿ, ದನ್ಯವಾದಗೈದರು. ಯಾದವ ಅಗ್ರಬೈಲು ಕಾರ್ಯಕ್ರಮಕ್ಕೆ ಸಹಕರಿಸಿದ್ದರು.