ಕಲಾವಿದನ ಕೈಯಲ್ಲಿ ಮೂಡಿಬಂದ ಮರಳಿನ ಆದಿಯೋಗಿಯ ಕಲಾಕೃತಿ
ಕೈಕಂಬ: ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಜ.28ರಂದು ದೇವಾಲಯದ ಅಂಗಣದ ವೇದಿಕೆಯಲ್ಲಿ ಪ್ರಸಾದ್ ಕುಳಾಯಿ ಹಾಗೂ ನಿಶಾಂತ್ ಕುಲಾಲ್ ಅಮ್ಮುoಜೆಯವರ ಕೈಚಳಕದಲ್ಲಿ ಮರಳಿನ ರಾಶಿಯಲ್ಲಿ ಸುಂದರವಾದ ಆದಿಯೋಗಿಯ ಕಲಾಕೃತಿ ಮೂಡಿಬಂದಿದೆ.
