ಬ್ರಹ್ಮಕಲಶೋತ್ಸವ ಪ್ರಯುಕ್ತ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ವೈದಿಕ ಪೂಜಾ ಕಾರ್ಯಕ್ರಮ
ಕೈಕಂಬ: ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಜ.24ರಂದು ಬುಧವಾರ ಬೆಳಗ್ಗೆ 7:00ರಿಂದ ಪೊಳಲಿ ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿ ಹಾಗೂ ವೆಂಕಟೇಶ್ ತಂತ್ರಿ ನೇತೃತ್ವದಲ್ಲಿ ಪುಣ್ಯಾಹ, ಗಣಪತಿ ಹೋಮ, ನವಗ್ರಹ ಹೋಮ, ಶಾಂತಿ ಪ್ರಾಯಶ್ಚಿತ್ತ ಹೋಮ, ಅನುಜ್ಞಾ ಕಲಶಾಭಿಷೇಕ, ಸಂಹಾರ ತತ್ವಹೋಮ, ತತ್ವಕಲಶಾಭಿಷೇಕ, ಜೀವೋದ್ವಾಸನೆ, ಜೀವಕಲಶ ಪೂಜೆ, ಶಯ್ಯಾ ಪೂಜೆ, ಜೀವಕಲಶ ಶಯ್ಯಾನಯನ ಪೂಜಾ ವಿಧಿವಿಧಾನ ನಡೆಯಿತು.

ಸಂಪತ್ ಕುಮಾರ್ ಅಮುಂಜೆಗುತ್ತು ಮತ್ತು ಶ್ರೀಮತಿ ಪ್ರತಿಭಾ ಶೆಟ್ಟಿ ಹಾಗೂ ಪ್ರತಾಪ್ ಶೆಟ್ಟಿ ಮತ್ತು ಶ್ರೀಮತಿ ಇಂದಿರಾ ಶೆಟ್ಟಿ ದಂಪತಿಗಳು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ತಂತ್ರಿಗಳು ಪೂಜಾ ವಿಧಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಕೊಂಜಾಲುಗುತ್ತು ದಿವಾಕರ ಶೆಟ್ಟಿ, ಅಮುಂಜೆಗುತ್ತು ಯಶೋಧ ಡಿ.ಶೆಟ್ಟಿ, ಕೃಷ್ಣಕುಮಾರ ಪೂಂಜ, ಅಮುಂಜೆಗುತ್ತು ದಕ್ಷರಾಜ್ ಶೆಟ್ಟಿ, ಅಮುಂಜೆಗುತ್ತು ಶೋಭಾ ಶೆಟ್ಟಿ, ಅಮುಂಜೆಗುತ್ತು ಸಂತೋಷ್ ಶೆಟ್ಟಿ, ಅಮುಂಜೆಗುತ್ತು ರಂಗನಾಥ್ ಶೆಟ್ಟಿ, ಅಮುಂಜೆಗುತ್ತು ರವೀಂದ್ರ ಶೆಟ್ಟಿ, ಕೆ.ಕೃಷ್ಣ ಕುಮಾರ್ ಪೂಂಜ, ಅಮುಂಜೆಗುತ್ತು ಲಕ್ಷ್ಮೀಪ್ರಸಾದ್ ಶೆಟ್ಟಿ, ಸತ್ಯಪ್ರಸಾದ್ ಶೆಟ್ಟಿ ಅಮುಂಜೆಗುತ್ತು, ಅಮುಂಜೆಗುತ್ತು ಪ್ರಫುಲ್ಲ ವಿ. ಶೆಟ್ಟಿ, ಅಮುಂಜೆಗುತ್ತು ಜ್ಯೋತಿ ಎ. ಶೆಟ್ಟಿ, ಅಮುಂಜೆಗುತ್ತು ನಾಗವೇಣಿ ಡಿ. ಶೆಟ್ಟಿ, ಅಮುಂಜೆಗುತ್ತು ವನಿತಾ ಎಸ್. ರೈ, ಆಶಾ ಸಂತೋಷ್ ಶೆಟ್ಟಿ, ಉಮೇಶ್ ಮುಂಡ ಗುರುಪುರ ಉಪಸ್ಥಿತರಿದ್ದರು.

ಅಪರಾಹ್ನ 3:00 ಗಂಟೆಯಿಂದ 5:00ರವರೆಗೆ ವಿಠೋಭ ಬಾಲ ಭಜನಾ ತಂಡ ಪಲ್ಲಿಪಾಡಿ ಇವರಿಂದ ಭಜನಾ ಸಂಕೀರ್ತನೆ. ಸಂಜೆ 5:00ರಿಂದ ನಿದ್ರಾಕಲಶ ಪೂಜೆ, ಕುಂಭೇಶ ಕರ್ಕರಿ ಪೂಜೆ, ವಿದ್ಯೇಶ ಕಲಶ ಪೂಜೆ, ಶಿರಸ್ತತ್ವ ಹೋಮ, ಭದ್ರಕ ಮಂಡಲ ಪೂಜೆ, ಧ್ಯಾನಾಧಿವಾಸ, ಅಧಿವಾಸ ಹೋಮ, ನವಶಕ್ತಿ ಹೋಮ ತಂತ್ರಿಗಳ ಉಪಸ್ಥಿತಿಯಲ್ಲಿ ನಡೆಯಲಿರುವುದು.

ಬಳಿಕ ಸಂಜೆ 6:00ರಿಂದ ಶ್ರೀ ಶಾರದಾ ಅಂಧ ಕಲಾವಿದರ ಗೀತಾ ಗಾಯನ ಕಲಾ ಸಂಘ ಇವರಿಂದ ಭಕ್ತಿ ಗಾನ ಸುಧಾ ಕಾಋಯಕ್ರಮ ನಡೆಯಲಿರುವುದು.



