ಬೆಂಜನಪದವು ಕೊರಗಜ್ಜ ಸಾನಿಧ್ಯದಲ್ಲಿ ಗಗ್ಗರ ಸೇವೆ
ಕೈಕಂಬ: ಬೆಂಜನಪದವು ರಕ್ಷಿತ್ ನಿಲಯದಲ್ಲಿ ಫೆ.೧೦ರಂದು ಶನಿವಾರ ಕೊರಗಜ್ಜ ದೈವದ ವಾರ್ಷಿಕ ಗಗ್ಗರ ಸೇವೆ ಜರಗಲಿರುವುದು.
ಬೆಳಗ್ಗೆ ೮:೩೦ಕ್ಕೆ ಗಣಹೋಮ, ನವಕ ಪ್ರಧಾನ ಹೋಮ, ೯:೦೦ಕ್ಕೆ ಅನ್ನ ಛತ್ರ ಉದ್ಘಾಟನೆ, ೧೦:೦೦ರಿಂದ ೬:೩೦ರವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಹಾಗೂ ಕೊರಗಜ್ಜ ದೈವದ ಗಗ್ಗರ ಸೇವೆ ನಡೆಯಲಿರುವುದು.

ಫೆ.೧೧ರಂದು ಭಾನುವಾರ ರಾತ್ರಿ೭:೩೦ರಂದು ಅಗೇಲು ಸೇವೆ ನಡೆಯಲಿರುವುದು ಎಂದು ಬೆಂಜನಪದವು ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ವಿಜಯ್ ಕೆ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.



