ಕೈಕಂಬ: ಮಳಲಿ ಮಟ್ಟಿ ಜೋಗಿ ಮಠದ ಶ್ರೀ ಕಾಲಭೈರವ ಮಂಜುನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಗಂಗಾಧರ ಜೋಗಿ ಅಧ್ಯಕ್ಷತೆಯಲ್ಲಿ ನಡೆದ ಬ್ರಹ್ಮಕಲಶೋತ್ಸವಕ್ಕಾಗಿ ರಚಿಸಿದ ವಿವಿಧ ಸಮಿತಿಗಳ ಸಮಾಲೋಚನಾ ಸಭೆಯಲ್ಲಿ ಜ.14ರಂದು ಭಾನುವಾರ ದೇವಸ್ಥಾನದಲ್ಲಿ ಫೆ.20ರಿಂದ 26ರವರೆಗೆ ನಡೆಯಲಿರುವ ಬ್ರಹ್ಮ ಕಲಶ ‘ಪುಣೋತ್ಸವ’ ಸಿದ್ಧತೆ ಕುರಿತು ಚರ್ಚಿಸಲಾಯಿತು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಿರಣ್ ಪಕ್ಕಳ ಮಾತನಾಡಿ, ಬಡಗುಳಿಪಾಡಿ, ತೆಂಕುಳಿಪಾಡಿ ಮತ್ತು ಮೊಗರು ಗ್ರಾಮಗಳ ಪ್ರತಿಯೊಂದು ಮನೆಗೆ ಹೋಗಿ ಆಮಂತ್ರಣ ಪತ್ರಿಕೆ ನೀಡಬೇಕು. ಬ್ರಹ್ಮ ಕಲಶದಂತಹ ಪುಣ್ಯ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.

ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ ನಾರಳ, ಕಾರ್ಯದರ್ಶಿ ಹರೀಶ್ ಮಟ್ಟಿ, ಕೋಶಾಧಿಕಾರಿ ಸೋಹನ್ ಅತಿಕಾರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೇಖರ ಜೋಗಿ, ಗಂಜಿಮಠ ಪಂಚಾಯಿತಿ ಸದಸ್ಯ ನೋಣಯ್ಯ ಕೋಟ್ಯಾನ್, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಸತೀಶ್ ಜೋಗಿ ಮಾಲೆಮಾರ್, ಸೀತಾರಾಮ ಜೋಗಿ, ಕೇಶವ ಪೂಜಾರಿ, ಮಾಜಿ ಕಾರ್ಪೊರೇಟರ್ ರಾಜೇಶ್ ಕೊಂಚಾಡಿ, ತಾ.ಪಂ ಮಾಜಿ ಸದಸ್ಯ ಸುನೀಲ್ ಗಂಜಿಮಠ, ಚರಣ್, ಜಯಕರ ಮಾಸ್ಟರ್ ಮತ್ತು ಆಡಳಿತ ಮಂಡಳಿಯ ಪ್ರಮುಖರು, ಜೀರ್ಣೋದ್ಧಾರ ಮತ್ತು ಬ್ರಹ್ಮ ಕಲಶೋತ್ಸವ ಸಮಿತಿ ಪದಾಧಿಕಾರಿಗಳು, ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
ಸತೀಶ್ ಶೆಟ್ಟಿ ಕಂದಾವರ ಸ್ವಾಗತಿಸಿ ನಿರೂಪಿಸಿದರು.
