ಕೃಷಿಕ ಸಂಘಗಳ ಒಕ್ಕೂಟದ ಜಂಟಿ ಆಶ್ರಯದಲ್ಲಿ ತೋಟಗಾರಿಕೆ ಇಲಾಖೆ ಮಾಹಿತಿ ಕಾರ್ಯಕ್ರಮ
ಕೈಕಂಬ: ನೇತ್ರಾವತಿ ಕೃಷಿಕರ ಸಂಘಗಳ ಒಕ್ಕೂಟ ಬಂಟ್ವಾಳ, ಶಿವ ಶಕ್ತಿ ಕೃಷಿಕರ ಅಭಿವೃದ್ಧಿ ಸಂಘ ತೆಂಕಬೆಳ್ಳೂರು ಹಾಗೂ ಶ್ರೀ ಕಾವೇಶ್ವರ ಕೃಷಿಕರ ಅಭಿವೃದ್ಧಿ ಸಂಘ ಬಡಗಬೆಳ್ಳೂರು ಇವರ ಜಂಟಿ ಆಶ್ರಯದಲ್ಲಿ ದ.10ರಂದು ಭಾನುವಾರ ತೆಂಕಬೆಳ್ಳೂರು ಕಾವೇಶ್ವರ ದೇವಾಸ್ಥಾನದ ಸಭಾಂಗಣದಲ್ಲಿ ತೋಟಗಾರಿಕ ಇಲಾಖೆ ಮಾಹಿತಿ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಬಡಗಬೆಳ್ಳೂರು ಪಂಚಾಯತ್ ಅಧ್ಯಕ್ಷೆ ರೂಪಾ ಶ್ರೀ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶಿವ ಶಕ್ತಿ ಕೃಷಿಕರ ಅಭಿವೃದ್ಧಿ ಸಂಘ ತೆಂಕಬೆಳ್ಳೂರು ಅಧ್ಯಕ್ಷ ನಿರಂಜನ್ ಸೇಮಿತ ಕುಂದಬೆಟ್ಟು ವಹಿಸಿಕೊಂಡಿದ್ದರು, ಮುಖ್ಯ ಅತಿಥಿಗಳಾಗಿ ದಿಶಾ ಸಂಸ್ಥೆ ಕೈಕಂಬದ ನಿರ್ದೇಶಕ ಸಿಲ್ವೆಸ್ಟರ್ ಡಿ ಸೋಜಾ , ನೇತ್ರಾವತಿ ಕೃಷಿಕರ ಅಭಿವೃದ್ಧಿ ಸಂಘಗಳ ಒಕ್ಕೂಟ ಬಂಟ್ವಾಳದ ಅಧ್ಯಕ್ಷ ಚಂದಪ್ಪ ಮೂಲ್ಯ ಹಾಗೂ ದೇವಪ್ಪ ಕುಲಾಲ್ ಕಾರ್ಯದರ್ಶಿ ನೇತ್ರಾವತಿ ಕೃಷಿಕರ ಅಭಿವೃದ್ಧಿ ಸಂಘಗಳ ಒಕ್ಕೂಟ ಬಂಟ್ವಾಳ ಮತ್ತು ಶ್ರೀ ಕಾವೇಶ್ವರ ಕೃಷಿಕರ ಅಭಿವೃದ್ಧಿ ಸಂಘ ಬಡಗಬೆಳ್ಳೂರು ಅಧ್ಯಕ್ಷ ರಮೇಶ್ ಬಟ್ಟಾಜೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಮಂಜುಳಾ ಆರ್ ಶೆಟ್ಟಿ ಸ್ವಾಗತಿಸಿದರು. ಪುಷ್ಪರಾಜ್ ನಿರೂಪಿಸಿದರು. ರಮೇಶ್ ಬಟ್ಟಾಜೆ ವಂದಿಸಿದರು. ನಿರಂಜನ್ ದಾಸ್ ಭಂಡಾರಿ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಜೋ ಪ್ರದೀಪ್ ಡಿ ಸೋಜಾ ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಬಂಟ್ಟಾಳ ಇವರು ಅಡಿಕೆ ಬೆಳೆಯ ಇತಿಹಾಸ, ದೇಶದಲ್ಲಿರುವ ವಿವಿಧ ಅಡಿಕೆ ಗಿಡಗಳ ಮಾಹಿತಿ, ಗಿಡಗಳ ಆಯ್ಕೆ, ನೆಡುವ ವಿಧಾನ, ಉಜಿರು ಕುಣಿಯ ಮಹತ್ವ, ರೋಗಗಳು ಮತ್ತು ನಿಯಂತ್ರಣ ಬಗ್ಗೆ ತಿಳಿಸಿದರು ಹಾಗೂ ತೋಟಗಾರಿಕೆ ಇಲಾಖೆಯಿಂದ ನೀಡುವ ಸವಲತ್ತು ಗಳ ಬಗ್ಗೆ ಮಾಹಿತಿ ನೀಡಿದರು