ಬಂಟ್ವಾಳ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ತುಂಬೆ ಇಲ್ಲಿ ಫೆಬ್ರವರಿ ತಿಂಗಳಿನಲ್ಲಿ ನಡೆಯುವ ಕ್ಷೇತ್ರದ ದೇವರ ಪ್ರತಿಷ್ಠೆ ಹಾಗೂ ಬ್ರಹ್ಮಕಳಶ ಪ್ರಯುಕ್ತ ಪೂರ್ವಭಾವಿಯಾಗಿ ಶ್ರೀ ಕ್ಷೇತ್ರದಲ್ಲಿ 48 ದಿವಸಗಳ ಸಂಧ್ಯಾ ಭಜನಾ ಸಂಕೀರ್ತನೆ ಡಿ.24 ರಿಂದ ಫೆ.9ರ ವೆರೆಗೆ ನಡೆಯಲಿದೆ.

ಪ್ರತಿದಿನ ಸಂಜೆ 6:00ರಿಂದ 8ಗಂಟೆ ತನಕ ವಿಶೇಷ ಆಹ್ವಾನಿತ ಅತಿಥಿಗಳು ದೀಪ ಬೆಳಗಿಸಿ ಸಂಧ್ಯಾ ಭಜನಾ ಸಂಕೀರ್ತನೆಗೆ ಚಾಲನೆ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕ್ಷೇತ್ರದ ಸೇವಾ ಸಮಿತಿಯ ಅಧ್ಯಕ್ಷ ಅರುಣ್ ಆಳ್ವ ತುಂಬೆ, ಬ್ರಹ್ಮಕಲಶ ಸಮಿತಿಯ ಪ್ರಧಾನ ಕಾರ್ಯದರ್ಶಿ ಜೀವನ್ ಆಳ್ವ, ಕೋಶಾಧಿಕಾರಿ ಜಗನ್ನಾಥ ಶೆಟ್ಟಿ ತುಂಬೆ, ಕ್ಷೇತ್ರದ ಪ್ರಧಾನ ಅರ್ಚಕರಾಗಿರುವ ಅಭಿಲಾಶ್ ಭಟ್ ಮತ್ತು ಸಂಧ್ಯಾ ಭಜನೆಯ ಸಂಯೋಜಕರು, ಕ್ಷೇತ್ರದ ಸೇವಾ ಸಮಿತಿ ಜೀರ್ಣೋದ್ಧಾರ ಸಮಿತಿ ಬ್ರಹ್ಮ ಕಲಶ ಸಮಿತಿ ಹಾಗೂ ಭಜನಾ ಸಮಿತಿ ಗಳ ಪದಾಧಿಕಾರಿಗಳು ಹಾಗೂ ಮಹಿಳಾ ಸಮಿತಿಯ ಸದಸ್ಯರ ಉಪಸ್ಥಿತಿಯಲ್ಲಿ ಸಂಧ್ಯಾ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಸಂದ್ಯಾ ಭಜನೆ ಸಂಘಟಕ ಉಮೇಶ್ ಕುಮಾರ್ ರೆಂಜೋಡಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

By suddi9

Leave a Reply

Your email address will not be published. Required fields are marked *