ಶ್ರೀ ಕ್ಷೇತ್ರ ಪೊಳಲಿಯಲ್ಲಿ ಧನುರ್ಮಾಸದ ಪದಚ್ಚಿಲ್ ಉತ್ಸವ
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯಲ್ಲಿ ಧನುರ್ಮಾಸದ ಪದಚ್ಚಿಲ್ ಉತ್ಸವವು ದ.೩೧ರ ಭಾನುವಾರದಿಂದ ಜ.೨ರವರೆಗೆ ನಡೆಯಲಿರುವುದು.

ದ.೩೧ರಂದು ಭಾನುವಾರ ಶ್ರೀ ಭದ್ರಕಾಳಿ ದೇವರಿಗೆ ವರ್ಷಾವದಿ ದೊಡ್ಡ ಗಾಯತ್ರಿ ಪೂಜೆ, ಜ.೧ರಂದು ಸೋಮವಾರ ಶ್ರೀ ದೇವಿಗೆ ರಂಗಪೂಜೆ ಹಾಗೂ ಜ.೨ರಂದು ಮಂಗಳವಾರ ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಲಿರುವುದು, ಈ ಕಾರ್ಯದಲ್ಲಿ ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕಾರ್ಯನಿರ್ವಹಣಾಧಿಕಾರಿ ವಿನಂತಿಸಿದ್ದಾರೆ.