ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನ.27ರಂದು ಅಪ್ಪದ ಪೂಜೆ ಸಂಪನ್ನ
ಪೊಳಲಿ: ಇತಿಹಾಸ ಪ್ರಸಿದ್ದ ಪುಣ್ಯ ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ವೃಶ್ಚಿಕ ಮಾಸದಲ್ಲಿ ನಡೆಯುವ ಅಪ್ಪದ ಪೂಜೆ ಬಹಳ ವಿಶೇಷ ಹಿಂದಿನ ಕಾಲದಲ್ಲಿ ಮಳೆ ಬಾರದೆ ಬರಗಾಲದಿಂದ ಕ್ರಷಿ ಚಟುವಟಿಕೆಗಳು ನಡೆಯದಿದ್ದಾಗ ಸಾವಿರ ಸೀಮೆಯ ಭಕ್ತರು ಸೇರಿ ಶ್ರೀದೇವಿಯಲ್ಲಿ ಪ್ರಾರ್ಥಿಸಿ ಕೃಷಿ, ಭತ್ತ ಬೆಳೆಯು ಸರಿಯಾಗಿ ಬಂದರೆ ಬೆಳೆಯಲ್ಲಿ ಒಂದಂಶದಿಂದ ಅಪ್ಪವನ್ನು ಮಾಡಿ ದೇವರಿಗೆ ಅರ್ಪಿಸುತ್ತೇವೆ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಹಿರಿಯರ ಮಾತು.
ನಂತರ ಭಕ್ತರು ಅವರವರ ಜಮೀನಿನಲ್ಲಿ ಕೃಷಿ ಬೆಳೆಗಳನ್ನು ಮಾಡಿ ಕೃಷಿ ಬೆಳೆಯಲ್ಲಿ ಬಂದ ಒಂದಂಶವನ್ನು ದೇವಳಕ್ಕೆ ಒಪ್ಪಿಸಿ ರಸೀದಿ ಪಡೆದು ಅಪ್ಪದ ಪೂಜೆಯ ದಿನ ದೇವರಿಗೆ ಅಪ್ಪವನ್ನು ಸಮರ್ಪಿಸಿ ಸಾವಿರ ಸೀಮೆಯ ಭಕ್ತಾಗಳು ಅಪ್ಪ ಸ್ವೀಕರಿಸುವ ಪ್ರತೀತಿ ಇತ್ತು.
ಪೊಳಲಿ ಕ್ಷೇತ್ರದ ಸಾವಿರ ಸೀಮೆಯ ಭಕ್ತರ ಸಮಸ್ತರ ಪಾಲ್ಗೊಳ್ಳುವಿಕೆಯಲ್ಲಿ ಅಪ್ಪದ ಸೇವೆಯು ನಡೆಯತ್ತ ಬಂದಿದೆ. ಇಲ್ಲಿಯ ಅಪ್ಪದ ಪೂಜೆಗೆ ಇಲ್ಲಿದ್ದೆ ಆದ ಕೆಲವು ವಿಶೇಷತೆಗಳಿದೆ.
22 ಕ್ವಿಂಟಾಲ್ ಅಕ್ಕಿಯಿಂದ ಮರವೂರು ಚಂದ್ರಶೇಖರ ರಾವ್ ಅವರ ನೇತೃತ್ವದಲ್ಲಿ ಸುಮಾರು 40 ಬ್ರಾಹ್ಮಣರಿಂದ 85 ಸಾವಿರದಷ್ಟು ಅಪ್ಪ ತಯಾರಿಯಾಗಿದೆ.
ರಾತ್ರಿ ದೇವಳದ ಅರ್ಚಕರು ಹಾಗೂ ಗುತ್ತಿನವರ ಸಮಕ್ಷಮದಲ್ಲಿ ವಾದ್ಯ ಗೋಷ್ಟಿಯೊಂದಿಗೆ ತಯಾರಾದ ಅಪ್ಪಗಳನ್ನು ರಾತ್ರಿ ಶ್ರೀದೇವಿಗೆ ಸಮರ್ಪಿಸಿ ಮಹಾಪೂಜೆಯ ಬಳಿಕ ಅಪ್ಪಗಳನ್ನು ಭಕ್ತಾದಿಗಳ ನೆರವಿನಿಂದ ಲಕೋಟೆಯಲ್ಲಿ ಹಾಕಿ ಸಿದ್ದ ಮಾಡುತ್ತಾರೆ. ದೇವರ ಬಲಿ ಹೊರಟ ಬಳಿಕ ಪ್ರಸಾದ ವಿತರಣೆಯನ್ನು ಮಾಡುತ್ತಾರೆ.
ಸಾವಿರ ಸೀಮೆಯ ಭಕ್ತಾದಿಗಳು ಕಾಣಿಕೆ ನೀಡಿ ಅಪ್ಪದ ಪೂಜೆ ಮಾಡಿಸಿ ಪ್ರಸಾದ ಸ್ವೀಕರಿಸಿದರು.