ಹ್ಯಾಂಡ್ ಬಾಲ್ ಪಂದ್ಯಾಟಕ್ಕೆ ರಾಷ್ಟ್ರಮಟಕ್ಕೆ ಆಯ್ಕೆ
ಬಂಟ್ವಾಳ: ಬಂಟ್ವಾಳ ತಾಲೂಕಿನ ಅಮ್ಟೂರು, ಕರಿಂಗಾನ ದೇವಮಾತ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಲಿಖಿತ್, ಮುಹಮ್ಮದ್ ಫಾಝ್, ವೃಷಭ್ ಜಿ ಅರಸ ಹಾಗೂ ಲಕ್ಷತ್ 14 ವಯೋಮಾನದ ಬಾಲಕರ ವಿಭಾಗದ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ರಾಷ್ಟ್ರಮಟಕ್ಕೆ ಆಯ್ಕೆಯಾಗಿದ್ದಾರೆ.
ಇವರನ್ನು ಶಾಲಾ ಸಂಚಾಲಕ ಫಾ.ಅನಿಲ್ ಡಿ’ಮೆಲ್ಲೊ, ಹಾಗೂ ಮುಖ್ಯೋಪಾಧ್ಯಾಯ ಫಾ.ಕಿರಣ್ ಮ್ಯಾಕ್ಸಿಮ್ ಪಿಂಟೋ ಅಭಿನಂದಿಸಿದ್ದಾರೆ. ಇವರಿಗೆ ಶಾಲಾ ದ್ಯೆಹಿಕ ಶಿಕ್ಷಕ ಮಹೇಶ್ ಶೆಟ್ಟಿ ತರಬೇತಿ ನೀಡಿದ್ದು, ಡಿ.16 ರಿಂದ 21 ರವರೆಗೆ ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯ ತಂಡದಿಂದ ಪ್ರತಿನಿಧಿಸುತ್ತಿದ್ದಾರೆ.