ತುಂಬೆ: ಇಂಚರ ಕಲಾವಿದರು ಅಭಿನಯದ “ಕಂಡನಿ ಬುಡೆದಿ”ನಾಟಕಕ್ಕೆ ಮುಹೂರ್ತ
ಬಂಟ್ವಾಳ: ನೂತನವಾಗಿ ಪುನರ್ ನಿರ್ಮಾಣಗೊಳ್ಳುತ್ತಿರುವ ಬಂಟ್ವಾಳ ತಾಲೂಕಿನ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಫೆಬ್ರವರಿಯಲ್ಲಿ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ತುಂಬೆ ಇಂಚರ ಕಲಾವಿದರು ಅಭಿನಯಿಸುವ ದಿ. ಕೆ.ಎನ್.ಟೈಲರ್ ವಿರಚಿತ ಕಂಡನಿ ಬುಡೆದಿ ನಾಟಕದ ಮುಹೂರ್ತ ಕಾರ್ಯಕ್ರಮ ಗುರುವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು.

ಕ್ಷೇತ್ರದ ಅರ್ಚಕ ಅಭಿಲಾಷ್ ಭಟ್ ಅವರು ಪ್ರಾರ್ಥನೆ ನೆರವೇರಿಸಿ ಶುಭ ಹಾರೈಸಿದರು. ದೇವಸ್ಥಾನ ನವೀಕರಣ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ, ಸಮಿತಿ ಪದಾಧಿಕಾರಿ ಉಮೇಶ್ ಸುವರ್ಣ, ಇಂಚರ ತಂಡದ ಸಂಚಾಲಕ ಸದಾಶಿವ ಡಿ. ತುಂಬೆ, ತುಂಬೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಸಾಲಿಯಾನ್, ಮಾಜಿ ಅಧ್ಯಕ್ಷ ಪ್ರವೀಣ್ ಬಿ. ತುಂಬೆ, ಪ್ರಮುಖರಾದ ಪ್ರಕಾಶ್ ಶೆಟ್ಟಿ ಶ್ರೀಶೈಲ ತುಂಬೆ, ನಾಟಕ ನಿರ್ದೇಶಕ ರತ್ನದೇವ್ ಪುಂಜಾಲಕಟ್ಟೆ, ಕಲಾವಿದರಾದ ಸೀತಾರಾಮ್ ಕೋಟ್ಯಾನ್, ಸುಧೀರ್ ತುಂಬೆ, ಚಂದ್ರಹಾಸ ಕಡೆಗೋಳಿ, ರಾಜೀವ ಗಾಣದಲಚ್ಚಿಲ್, ಜೀವನ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು. ನಾಟಕ ಫೆಬ್ರವರಿ17 ರಂದು ಪ್ರದರ್ಶನಗೊಳ್ಳಲಿದೆ.