ಲಯನ್ ಪ್ರಾಂತೀಯ ಸಮ್ಮಿಲನ ಸಮಿತಿ ಅಧ್ಯಕ್ಷರಾಗಿ ದಾಮೋದರ ಬಿ.ಎಂ. ಆಯ್ಕೆ
ಬಂಟ್ವಾಳ: ಲಯನ್ಸ್ ಜಿಲ್ಲೆ ೩೧೭ಡಿಯ ಪ್ರಾಂತ್ಯ ೫ರ ಪ್ರಾಂತೀಯ ಸಮ್ಮಿಲನ ನಡೆಸುವ ಹಾಗೂ ಪ್ರಾಂತೀಯ ಸಮ್ಮಿಲನ ಸಮಿತಿ ರಚಿಸುವ ಬಗ್ಗೆ ಪೂರ್ವಭಾವಿ ಸಭೆ ಮಂಚಿ ಲಯನ್ಸ್ ಸೇವಾ ಮಂದಿರದಲ್ಲಿ ಪ್ರಾಂತೀಯ ಅಧ್ಯಕ್ಷರಾದ ರಮಾನಂದ ನೂಜಿಪ್ಪಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಪ್ರಾಂತೀಯ ಸಮ್ಮಿಲನ ಸಮಿತಿಯನ್ನು ರಚಿಸಲಾಯಿತು. ಪ್ರಾಂತೀಯ ಸಮ್ಮಿಲನ ಅಧ್ಯಕ್ಷರಾಗಿ ದಾಮೋದರ ಬಿ.ಎಂ. ಮಾರ್ನಬೈಲು ಆಯ್ಕೆಗೊಂಡರು. ಕಾರ್ಯದರ್ಶಿಯಾಗಿ ಜಯಪ್ರಕಾಶ್ ರೈ ಮೇರಾವು, ಕೋಶಾಧಿಕಾರಿಯಾಗಿ ರಾಮ್‌ಪ್ರಸಾದ್ ರೈ, ಗೌರವ ಮಾರ್ಗದರ್ಶಕರಾಗಿ ವಸಂತ ಕುಮಾರ್ ಶೆಟ್ಟಿ, ಕೆ. ದೇವದಾಸ ಭಂಡಾರಿ, ಗೌರವ ಅಧ್ಯಕ್ಷರಾಗಿ ಡಾ. ಗೋಪಾಲ ಆಚಾರ್ ಮಂಚಿ, ಗೌರವ ಸಲಹೆಗಾರರಾಗಿ ವಿಠಲ ಕುಮಾರ್ ಶೆಟ್ಟಿ, ಮನೋರಂಜನ್ ಕೆ. ಆರ್. ಹಾಗೂ ವಿವಿಧ ಸಮಿತಿಗಳನ್ನು ರಚಿಸಲಾಯಿತು.
2024 ರ ಜನವರಿ ೧೧ ರಂದು ನಡೆಯಲಿರುವ ಪ್ರಾಂತೀಯ ಸಮ್ಮಿಲನವು ವಿವಿಧ ಸೇವಾ ಕಾರ್ಯಕ್ರಮಗಳ ಸಹಿತವಾಗಿ ಪ್ರಾಂತ್ಯದ ಎಲ್ಲಾ ೧೦ ಕ್ಲಬ್‌ಗಳ ಸಂಪೂರ್ಣ ತೊಡಗಿಸಿಕೊಳ್ಳುವಿಕೆಯ ಮೂಲಕ ಯಶಸ್ವಿಗೊಳಿಸುವಂತೆ ಕೋರಲಾಯಿತು.
ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಇದರ ಅಧ್ಯಕ್ಷೆ ರಮಾ ಜಿ. ಆಚಾರ್ ಸ್ವಾಗತಿಸಿದರು. ಪ್ರಾಂತೀಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿಯವರು ಪ್ರಸ್ತಾವನೆಗೈದರು. ದಾಮೋದರ ಬಿ.ಎಂ. ಸಮಿತಿಗಳ ರೂಪುರೇಷೆಗಳ ಬಗ್ಗೆ ವಿವರಿಸಿದರು.
ಪೂರ್ವ ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿ, ಪ್ರಾಂತೀಯ ಸಂಯೋಜಕ ವಿಜಯ ರೈ, ವಲಯಾಧ್ಯಕ್ಷರಾದ ಎವುಜಿನ್ ಲೋಬೊ, ಡೊನಾಲ್ಡ್ ಬಂಟ್ವಾಳ್, ವಲಯ ಸಂಯೋಜಕ ಸತೀಶ್ ಭಂಡಾರಿ, ಕ್ಲಬ್ ಕಾರ್ಯದರ್ಶಿ ಶರ್ಮಿಳಾ ವಿ. ಶೆಟ್ಟಿ, ಕೋಶಾಧಿಕಾರಿ ರಾಜಲಕ್ಷ್ಮೀ ಮನೋರಂಜನ್, ಕ್ಲಬ್ ಅಧ್ಯಕ್ಷರುಗಳಾದ ಆದರ್ಶ್ ಕೆ.ಎನ್., ಫೆಲಿಕ್ಸ್ ಲೋಬೊ, ಅರುಣ್ ಡಿಸೋಜ, ಜಯರಾಮ ಬಳ್ಳಾಲ್, ಚಂದ್ರಶೇಖರ ಶೆಟ್ಟಿ, ಜಗದೀಶ್ ಕೊಯಿಲ, ನೋವೆಲ್ ಲೋಬೊ ಮತ್ತಿತರರು ಉಪಸ್ಥಿತರಿದ್ದರು.
ಜಯಪ್ರಕಾಶ್ ರೈ ಮೇರಾವು ವಂದಿಸಿದರು. ರಾಮ್‌ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.