ಧರ್ಮಸ್ಥಳದಿಂದ ಫರಂಗಿಪೇಟೆ ಆಂಜನೇಯ ದೇವಳಕ್ಕೆ 5 ಲಕ್ಷ ರೂ. ಸಹಾಯ ಧನದ ಚೆಕ್ ಹಸ್ತಾಂತರ
ಬಂಟ್ವಾಳ: ಪರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ 5 ಲಕ್ಷ ರೂ. ಸಹಾಯಧನದ ಚೆಕ್ ನ್ನು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಗೆ ಹಸ್ತಾಂತರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಮಾಧವ ಗೌಡ, ವಲಯದ ಜನಜಾಗೃತಿ ವೇದಿಕೆಯ ಸದಸ್ಯ ಸದಾನಂದ ಆಳ್ವ ಅರ್ಕುಳ, ತುಂಬೆ ವಲಯದ ಮೇಲ್ವಿಚಾರಕಿ ಮಮತಾ ಸಂತೋಷ್, ಸೇವಾ ಪ್ರತಿನಿಧಿಗಳಾದ ಅಮಿತ ಮಲ್ಲಿಕಾ, ಶೈಲಜಾ, ಪರಂಗಿಪೇಟೆ ಹಾಗೂ ಸುಜೀರ್ ಒಕ್ಕೂಟದ ಅಧ್ಯಕ್ಷರುಗಳಾದ ಸುಕೇಶ್ ಶೆಟ್ಟಿ, ಮತ್ತು ಲೀಡಿಯಾ ಪಿಂಟೋ, ಪದಾಧಿಕಾರಿಗಳಾದ ಸಂದೀಪ್, ನಾಗೇಶ್, ಸಂತೋಷ, ರಾಧಿಕಾ, ಗಣೇಶ್ ವಿನುತಾ, ಯಶವಂತ ಸದಸ್ಯರಾದ, ಗೀತಾ, ಸೀತಾ, ಸುಂದರಿ, ಮೋಹನ್ ಸುಜೀರ್, ಸುರೇಶ್, ಜಗದೀಶ್, ಮನೋಹರ ನಾಯ್ಕ್, ಸುನಿತಾ, ಚಾರ್ಲಿ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರು ಸ್ಥಳೀಯ ಗಣ್ಯರಾದ ಉಮೇಶ್ ಶೆಟ್ಟಿ ಬರ್ಕೆ, ಚಂದ್ರಶೇಖರ್ ಗಾಂಭೀರ್, ಸಂತೋಷ ಗಾಂಭೀರ, ಮನೋಜ್ ತಪ್ಪೆ ಕಲ್ಲು, ಶಿವರಾಮ್ ಶೆಟ್ಟಿ ತೇವು, ಸತೀಶ್ ಶೆಟ್ಟಿ ಕಲ್ಲತಡಮೆ, ಜಯಂತ ಪದೇಂಜರ್ ಮೊದಲಾದವರು ಉಪಸ್ಥಿತರಿದ್ದರು.