ರಾಜ್ಯ ಮಟ್ಟಕ್ಕೆ ಆಯ್ಕೆ
ಬಂಟ್ವಾಳ: ಮಂಡ್ಯದಲ್ಲಿ ನಡೆದ ವಿಭಾಗ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದ.ಕ ಜಿಲ್ಲೆಯನ್ನು ಪ್ರತಿನಿಧಿಸಿದ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ೭ನೇ ತರಗತಿಯ ಕುಲ್ಯಾರ್ ನಾರಾಯಣ ಶೆಟ್ಟಿ ಹಾಗೂ ಶಶಿಪ್ರಭಾ ದಂಪತಿಯ ಪುತ್ರ ಸಂಕೀರ್ತ್ ಶೆಟ್ಟಿ, ಕಲ್ಲಡ್ಕ ರಾಜೀವ ಹಾಗೂ ವಾಣಿ ದಂಪತಿ ಪುತ್ರ ಶ್ರೇಯಾಂಕ್ ಆರ್ ವಿ ಹಾಗೂ ಭಾಸ್ಕರ ಜಿ ಮತ್ತು ಪ್ರಿಯಾಂಕ ದಂಪತಿಯ ಪುತ್ರ ಚಿಂತನ್ ಜಿ ಇವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
ಇವರಿಗೆ ವಿದ್ಯಾಕೇಂದ್ರದ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯೋಪಾಧ್ಯಾಯರು, ಅಧ್ಯಾಪಕರು ಹಾಗೂ ಅಧ್ಯಾಪಕೇತರರು ಅಭಿನಂದಿಸಿದ್ದಾರೆ.