ನಲ್ಲಿದಡ್ಡಲಕಾಡು ಶಾಲೆಗೆ ವಾಮದಪದವು ಕಾಲೇಜಿನ ಬಿಎಸ್ ಡಬ್ಲ್ಯೂ ವಿದ್ಯಾರ್ಥಿಗಳ ನಿಯೋಗ ಭೇಟಿ
ಬಂಟ್ವಾಳ: ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎಸ್ ಡಬ್ಲ್ಯೂ ವಿದ್ಯಾರ್ಥಿಗಳ ನಿಯೋಗ ಎನ್ ಈ ಪಿ ಬೇಸ್ ನಲ್ಲಿದಡ್ಡಲಕಾಡು ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಭೇಟಿ ನೀಡಿದರು.
ಸುಮಾರು 30 ವಿದ್ಯಾರ್ಥಿಗಳನ್ನೊಳಗೊಂಡ ನಿಯೋಗ 15 ಸಂಘ ಸಂಸ್ಥೆಗಳಿಗೆ ಭೇಟಿ ನೀಡಿದ್ದು, ಅದರಲ್ಲಿ ಮಾದರಿ ಸಂಸ್ಥೆಯಾದ ದಡ್ಡಲಕಾಡು ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಸೇರಿದೆ.
ಇದರಲ್ಲಿ 17 ವಿದ್ಯಾರ್ಥಿಗಳು ವೆಸ್ಟ್ ಬೆಂಗಾಲ್ ನ ವಿದ್ಯಾರ್ಥಿಗಳಾಗಿದ್ದರು . ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪ್ರೌಢಶಾಲಾ ವಿಭಾಗದ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪುರುಷೋತ್ತಮ್ ಅಂಚನ್ ರವರಲ್ಲಿ ನಿಯೋಗದ ವಿದ್ಯಾರ್ಥಿಗಳು ವಿವಿಧ ಪ್ರಶ್ನೆಗಳನ್ನು ಕೇಳಿ ಮಾಹಿತಿಯನ್ನು ಪಡೆದರು. ಶಾಲೆ ,ಕಟ್ಟಡ ,ಶಾಲೆ ನಡೆದು ಬಂದ ಹಾದಿ ,ವಿದ್ಯಾರ್ಥಿ ,ಶಿಕ್ಷಕರ ಬಗ್ಗೆ ಚರ್ಚಿಸಿದರು.ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತಿರುವ ಶಾಲೆಯ ಸೌಲಭ್ಯಗಳ ಬಗ್ಗೆ ತಿಳಿಸಿದರು.
ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಉದಯ್ ಕುಮಾರ್ ಮಾತನಾಡಿ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು ,ಸದಸ್ಯರುಗಳ ಕಾರ್ಯವೈಖರಿಗೂ ಅಭಿನಂದನೆ ಸಲ್ಲಿಸಿದರು.