ಡಿ.ವೈ.ಎಸ್.ಪಿ ಪ್ರತಾಪ್ ಸಿಂಗ್ ಥೋರಾಟ್ ವರ್ಗಾವಣೆ
ಬಂಟ್ವಾಳ: ಬಂಟ್ವಾಳ ಡಿ.ವೈ.ಎಸ್.ಪಿ. ಪ್ರತಾಪ್ ಸಿಂಗ್ ಥೋರಾಟ್ ಅವರನ್ನು ಬೆಂಗಳೂರು ಲೋಕಾಯುಕ್ತ ಕಚೇರಿಗೆ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಡಿ.ಸಿ.ಆರ್.ಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯಪ್ರಸಾದ್ ಇವರನ್ನು ಬಂಟ್ವಾಳ ಡಿ.ವೈ.ಎಸ್.ಪಿ ಯಾಗಿ ಪೊಲೀಸ್ ಇಲಾಖೆ ನೇಮಕ ಮಾಡಲಾಗಿದೆ.
ವೆಲೆಂಟೈನ್ ಡಿ.ಸೋಜ ಅವರ ವರ್ಗಾವಣೆ ಬಳಿಕ ಬಂಟ್ವಾಳದಲ್ಲಿ ಡಿ.ವೈಎಸ್.ಪಿ.ಯಾಗಿ ಕೆಲ ವರ್ಷಗಳಿಂದ ಕರ್ತವ್ಯ ಮಾಡುತ್ತಿದ್ದರು.
ಇದೀಗ ರಾಜ್ಯದಲ್ಲಿ ಕೆಲವು ಪೋಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಅದೇಶ ಹೊರಡಿಸಿದೆ.