5 ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಎಮ್ಮೆ, ಅದರಲ್ಲೂ ವಿಶೇಷವಾಗಿ ಅದರ ಕರುಗಳನ್ನು ಸಾಮೂಹಿಕವಾಗಿ ಗಢಿಮಾಯಿ ದೇವತೆಗೆ ಬಲಿ ಕೊಡಲಾಗುತ್ತದೆ.
ಹೌದು!! ಕೇವಲ ಎರಡು ದಿನಗಳ ಅವಧಿಯಲ್ಲಿ ಬರೋಬ್ಬರಿ 5 ಲಕ್ಷ ಕ್ಕೂ ಹೆಚ್ಚು ಪ್ರಾಣಿಗಳನ್ನು ಬಲಿ ನೀಡಲಾಗುವ 'ವಿಶ್ವದ ಬೃಹತ್ ಪ್ರಾಣಿ ಬಲಿ ಜಾತ್ರೆ' ಎಂದೇ ಕುಖ್ಯಾತಿಗೀಡಾಗಿರುವ ನೇಪಾಳದ ಬಾರಾ ಜಿಲ್ಲೆಯ ಬರಿಯಾರ್‌ಪುರದಲ್ಲಿನ 'ಗಢಿಮಾಯಿ ಮೇಳ'ಕ್ಕೆ ಶುಕ್ರವಾರದಿಂದ ಚಾಲನೆ ದೊರೆತಿದೆ.
ಬಿಹಾರಕ್ಕೆ ಹೊಂದಿಕೊಂ ಡಿರುವ ಬಾರಾ ಜಿಲ್ಲೆಯಲ್ಲಿ ನಡೆಯುವ ಈ ಜಾತ್ರೆಗೆ ಭಾರತೀಯರೂ ಸಾಕಷ್ಟು ಸಂಖ್ಯೆಯಲ್ಲಿ ತೆರಳಿ ಬಲಿ ಸಮರ್ಪಿಸು ತ್ತಾರೆ. ಇಲ್ಲಿ ಬಲಿ ನೀಡಲಾಗುವ ಎಮ್ಮೆ, ಮೇಕೆಗಳ ಪೈಕಿ ಶೇ.70ರಷ್ಟು ಭಾರತ ದಿಂದಲೇ ಸಾಗಣೆಯಾಗುತ್ತದೆ. ಗುರುವಾರ ರಾತ್ರಿ ಹಂದಿ, ಪಾರಿವಾಳ, ಬಾತುಕೋಳಿ, ಕೋಳಿ (ಹೇಂಟೆ) ಹಾಗೂ ಇಲಿಯನ್ನು ‘ಪಂಚ ಬಲಿ’ ಹೆಸರಲ್ಲಿ ಕೊಲ್ಲಲಾ ಗಿದೆ. ಶುಕ್ರವಾರ ಬೆಳಗ್ಗೆಯಿಂದ ಎಮ್ಮೆಗಳ ಬಲಿ ನೀಡುವ ಕಾರ್ಯ ಆರಂಭವಾಗಿದೆ.
ಕತ್ತಿ, ಖಡ್ಗ ಮತ್ತಿತರೆ ಆಯುಧ ಹಿಡಿದ ಸ್ಥಳೀಯರು ಐದು ಸಾವಿರ ಎಮ್ಮೆಗಳನ್ನು ಸಾಮೂಹಿಕ ಬಲಿ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. 2009ರಲ್ಲಿ ನಡೆದ ಜಾತ್ರೆ ವೇಳೆ 25 ಸಾವಿರ ಎಮ್ಮೆಗಳನ್ನು ಬಲಿ ನೀಡಲಾಗಿತ್ತು. ದೇವರ ಹೆಸರಲ್ಲಿ ಹತ್ಯೆಯಾದ ಇತರೆ ಪ್ರಾಣಿ- ಪಕ್ಷಿಗಳ ಸಂಖ್ಯೆ ಎಷ್ಟು ಎಂಬ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಐದು ಲಕ್ಷಕ್ಕೂ ಹೆಚ್ಚು ಪ್ರಾಣಿಗಳನ್ನು ಬಲಿ ನೀಡಲಾಗಿದೆ ಎಂದು ಪ್ರಾಣಿ ರಕ್ಷಣಾ ಸಂಘಟನೆಗಳು ಹೇಳಿಕೊಂಡಿದ್ದವು.
ಲಕ್ಷಗಟ್ಟಲೆ ಭಕ್ತರು ನೇಪಾಳ ಸಾಮೂಹಿಕ ಪ್ರಾಣಿಬಲಿ ಹಾಜರಿದ್ದರು.
ಜಾಗೃತಿ: ಈ ನಡುವೆ ಪ್ರಾಣಿಗಳನ್ನು ಬಲಿ ನೀಡುವುದರ ವಿರುದ್ಧ ಹೋರಾಟಗಾರರು ಸಾಕಷ್ಟು ಜಾಗೃತಿ ಮೂಡಿಸಿದ್ದಾರೆ. ಅಲ್ಲದೆ ಭಾರತದಿಂದ ನೇಪಾಳಕ್ಕೆ ಪ್ರಾಣಿಗಳ ಸಾಗಣೆಗೆ ಕಳೆದ ತಿಂಗಳಷ್ಟೆ ಸುಪ್ರೀಂಕೋರ್ಟ್ ನಿಷೇಧ ಹೇರಿದೆ. ಇದರಿಂದಾಗಿ ಈ ಬಾರಿ ಜಾತ್ರೆಯಲ್ಲಿ ಬಲಿ ಪ್ರಮಾಣ ತಗ್ಗಬಹುದು ಎಂದು ಹೇಳಲಾಗುತ್ತಿದೆ. ಆದರೂ 3 ತಿಂಗಳಿಂದ ಮಾರುಕಟ್ಟೆಯಲ್ಲಿ 1.25 ಲಕ್ಷ ಮೇಕೆಗಳನ್ನು ಜನರು ಬಲಿಗಾಗಿ ಖರೀದಿಸಿದ್ದಾರೆ ಎನ್ನಲಾಗಿದೆ.
UV
ಕೆಳಗಿನ ಚಿತ್ರಗಳನ್ನು ಗ್ರಾಫಿಕ್ ಮತ್ತು ಪುಕ್ಕಲ ಹೃದಯ, ಮಸುಕಾದ ಹೃದಯದವರಿಗೆ ಅಲ್ಲ
The pictures following are graphic and are not for the faint hearted .












