ನ್ಯೂಯಾರ್ಕ್(ನಾಸಾ): ಮಂಗಳ ಗ್ರಹದಲ್ಲಿ ಮಾನವರಿಬ್ಬರು ನಡೆದುಕೊಂಡು ಹೋಗುವುದನ್ನು ಕಂಡಿದ್ದಾಗಿ ನಿವೃತ್ತ ನಾಸಾ ವಿಜ್ಞಾನಿಗಳು ಹೇಳಿರುವುದರಿಂದ ಇಡೀ ವಿಶ್ವದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.
ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆಯಾಗಿರುವ ನಾಸ ವಿಜ್ಞಾನಿಯಾಗಿರುವ ಜಾಕಿ ಎಂಬವರ ಬಾಯಿಯಿಂದಲೇ ಈ ಹೇಳಿಕೆ ಹೊರಬಿದ್ದಿರುವುದರಿಂದ ಈ ಹೇಳಿಕೆಗೆ ಬಾರೀ ತೂಕ ಬಂದಂತಾಗಿದೆ.

(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)

mars
1979ರಲ್ಲಿ ಇಬ್ಬರು ವ್ಯಕ್ತಿಗಳು ಮಂಗಳ ಗ್ರಹದಲ್ಲಿ ನಡೆದಿರುವುದನ್ನು ಕಣ್ಣಾರೆ ಕಂಡಿದ್ದೇನೆ, ಮಂಗಳನ ಅಂಗಳದಲ್ಲಿ ನಾಸಾ ಕಳಿಸಿದ ಉಪಗ್ರಹದ ಕೆಮಾರಾ ಸ್ಕ್ರೀನ್ನಲ್ಲಿ ಮಾನವರಿಬ್ಬರು ನಡೆದುಕೊಂಡು ಹೋಗುತ್ತಿದ್ದರು. ಈ ದೃಶ್ಯವನ್ನು ಕಣ್ಣಾರೆ ನೋಡಿದ ನನಗೆ ಬಹಳ ಅಚ್ಚರಿಯಾಗುತ್ತಿದೆ. ಅಕ್ಕದೆ ಈ ವಿಸ್ಮಯ ಕಳೆ 27 ವರ್ಷಗಳಿಂದಲೂ ಕಾಡುತ್ತಲೇ ಇದೆ ಎಂದು ರೇಡಿಯೋ ಒಂದಕ್ಕೆ ಸಂದರ್ಶನ ನೀಡಿರುವ ಜಾಕಿ ಹೇಳಿದ್ದಾರೆ.
ಅನ್ಯಗ್ರಹ ವಾಸಿಗಳ ಬಗ್ಗೆ ಸಂಶೋಧನೆ ನಡೆಯುತ್ತಲೇ ಇದೆ. ಮೊತ್ತಮೊಲನೆಯದಾಗಿ ಚಂದ್ರನಲ್ಲಿಗೆ ಉಪಗ್ರಹ ಳಿಸಿದ್ದಾಗ ಯಾವುದೋ ಅಂತರಿಕ್ಷದಿಂದ ಬಂದಿದ್ದ ರೇಡಿಯೋ ಸಂಕೇತಗಳ ಬಗ್ಗೆ ಇನ್ನೂ ಗೊಂದಲವಿದ್ದು ನಿಗೂಢವಾಗಿಯೇ ಉಳಿದಿದೆ.
ಅದರ ನಂತರ ಅನೇಕ ಬಾರಿ ಹಾರುವ ತಟ್ಟೆಗಳು ಕಂಡುಬಂದಿದೆ ಎಂದು ಅಲ್ಲಿ ಇಲ್ಲಿ ವರದಿಯಾಗುತ್ತಲೇ ಇದೆ. ಒಟ್ಟಿನಲ್ಲಿ ಅನ್ಯಗೃಹದಲ್ಲಿ ಮಾನವರಂತೆಯೇ ಇರುವ ಜೀವಿಗಳಿವೆ ಎಂಬುದಕ್ಕೆ ನಾಸಾದ ಮಾಜಿ ವಿಜ್ಞಾನಿ ನೀಡಿದ ಹೇಳಿಕೆಯಿಂದ ಸಾಬೀತಾಗಿದೆ

By suddi9

Leave a Reply

Your email address will not be published. Required fields are marked *