ಎಂ.ಸುಬ್ರಹ್ಮಣ್ಯ ಭಟ್ ಗೆ “ಚೈತನ್ಯ ಶ್ರೀ ರಾಜ್ಯ ಪ್ರಶಸ್ತಿ” ಪ್ರಧಾನ
ಬಂಟ್ವಾಳ: ಮಂಗಳೂರಿನ ಪುರಭವನದಲ್ಲಿ ಈಚೆಗೆ ನಡೆದ ಕಥಾಬಿಂದು ಪ್ರಕಾಶನ 16ನೇ ವಾರ್ಷಿಕೋತ್ಸವದಲ್ಲಿ ಧಾರ್ಮಿಕ ಮುಂದಾಳು, ಸಜೀಪ ಮಾಗಣೆಯ ತಂತ್ರಿಗಳಾದ ಎಂ.ಸುಬ್ರಹ್ಮಣ್ಯ ಭಟ್ ಅವರಿಗೆ “ಚೈತನ್ಯ ಶ್ರೀ ರಾಜ್ಯ ಪ್ರಶಸ್ತಿ” ಯನ್ನು ಪ್ರಧಾನ ಮಾಡಿ ಗೌರವಿಸಲಾಯಿತು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ಈ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.ಈ ಸಂದರ್ಭ ಪ್ರಮುಖರಾದ ಕೆ.ಭುವನಾಭಿ ರಾಮ ಉಡುಪ, ಜಯಶಂಕರ ಬಾಸ್ರಿತ್ತಾಯ. ಮಂಗಳೂರು ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಕಲಾ,ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ,ಸಾಹಿತ್ಯ ಸಂಘಟಕ ಪಿ.ಎ ಪ್ರದೀಪ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು