ಬಂಟ್ವಾಳ: ಯೂವುದೇ ಪೂರ್ವಸೂಚನೆ ನೀಡದೆ  ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿದ್ದಲ್ಲದೆ, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಕಾರಣಕ್ಕೆ ಎಂಟು ಮಂದಿ ಗ್ರಾಮ ಪಂಚಾಯತ್ ಸದಸ್ಯರ ಮೇಲೆ ಕಾನೂನು ಕ್ರಮಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಬಂಟ್ವಾಳ ನಗರ ಪೊಲೀಸ್  ಠಾಣೆಯಲ್ಲಿ ಕೇಸು ದಾಖಲಾಗಿರುವ ಘಟನೆ ನಡೆದಿದೆ.

ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾ.ಪಂ.ನ ಪಿಡಿಒ ಲಕ್ಷ್ಮಣ್‌ ಅವರು ಅಧಿಕಾರ ದುರುಪಯೋಗ ಪಡಿಸುತ್ತಿದ್ದಾರೆ ಎಂದು ಆರೋಪಿಸಿ ಇಲ್ಲಿನ ಎಸ್.ಡಿ.ಪಿ.ಐ. ಬೆಂಬಲಿತ ಎಂಟು ಮಂದಿ ಸದಸ್ಯರುಗಳು ಸೋಮವಾರ  ಗ್ರಾಮಪಂಚಾಯತ್ ಗೆ  ಮುತ್ತಿಗೆ ಹಾಕಿದ್ದರು.

ಈ ಸಂದರ್ಭ ಪಂಚಾಯತ್ ಸಿಬ್ಬಂದಿಗಳಾದ ಮೀನಾಕ್ಷಿ, ಮಹಮ್ಮದ್ ಹಾರಿಶ್, ನಳಿನಿ, ಸುಮನಾ ರವರನ್ನು ಕಚೇರಿಯೊಳಗೆ ಹೋಗದಂತೆ ತಡೆ ಹಿಡಿದು ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಕಚೇರಿಯ ಬೀಗದ ಕೀಯನ್ನು ಬಲವಂತವಾಗಿ ಕಸಿದುಕೊಂಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

ಗ್ರಾಮ ಪಂಚಾಯತ್ ಸದಸ್ಯರಾದ ಅಬುಬಕ್ಕರ್ ಸಿದ್ದೀಕ್, ಜಮಾಲುದ್ದೀನ್, ಫಾತಿಮಾ ಸೌನ್, ಪೌಝಿಯಾ, ಸಬೀನಾ, ರಜಿಯಾ, ಸಾಜಿದ್, ವಹಿದಾಬಾನು ಎಂಬವರ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಇವರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಪಿಡಿಒ ಲಕ್ಷ್ಮಣ್ ಅವರು ನಗರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.

By Suddi9

Leave a Reply

Your email address will not be published. Required fields are marked *