ಪಾಶ್ಚಾತ್ಯ ವಿಕೃತಿಗೆ ಮರುಳಾಗಿ ನಮ್ಮ ಸಂಸ್ಕೃತಿಯನ್ನು ಹಾಳು ಮಾಡದಿರಿ:ಗಣರಾಜ್ ಭಟ್ ಕೆದಿಲ
ಕೈಕಂಬ: ನಾಗಶ್ರೀ ಮಿತ್ರವೃಂದ ಹಾಗೂ ನಾಗಶ್ರೀ ಮಾತ್ರವೃಂದದ ಸಹಭಾಗಿತ್ವದಲ್ಲಿ ತೆಂಕಬೆಳ್ಳೂರಿನ ಕಮ್ಮಾಜೆಯ ೨೨ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ಹಿಂದೂ ಜಾಗರಣ ವೇದಿಕೆಯ ಕಾರ‍್ಯಕಾರಿಣಿ ಸದಸ್ಯ ಗಣರಾಜ್ ಭಟ್ ಕೆದಿಲ ಧಾರ್ಮಿಕ ಭಾಷಣದಲ್ಲಿ ಪಾಶ್ಚಾತ್ಯ ವಿಕೃತಿಗೆ ಮರುಳಾಗಿ ನಮ್ಮ ಸಂಸ್ಕೃತಿಯನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂ ಜಾಗರಣ ವೇದಿಕೆ ಸಂಚಾಲಕರು ನರಸಿಂಹ ಮಾಣಿ ವಹಿಸಿ ಮಾತನಾಡಿದರು. ಪುತ್ತೂರು ಭಜರಂಗದಳದ ಸಂಚಾಲಕ ಭರತ್ ಕುಮ್ಡೇಲ್ ಮಾತನಾಡಿದರು.
ಮುಖ್ಯ ಅಥಿತಿಗಳಾಗಿ ಕೊರಗಜ್ಜ ಕಟ್ಟೆ ಬೆಂಜನಪದವಿನ ಧರ್ಮದರ್ಶಿ ವಿಜಯ್ ಕೆ, ಪಂಚಗ್ರಾಮ ಬಿಲ್ಲವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ರೋಶನ್ ಪುಂಚಮೆ, ಬಡಗಬೆಳ್ಳೂರಿನ ಉದ್ಯಮಿ ಪ್ರಕಾಶ್ ಆಳ್ವ ಉಪಸ್ಥಿತರಿದ್ದರು. ಶಾಸಕ ರಾಜೇಶ್ ನಾಯ್ಕ್, ಪುತ್ತೂರಿನ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹಾಗೂ ಮಂಗಳೂರಿನ ಹಿಂದೂ ಮುಖಂಡ ಪ್ರವೀಣ್ ವಾಲ್ಕೆ ಶುಭಹಾರೈಸಿದರು.
ಸಂಜೆ ೬ಗಂಟೆಯಿಂದ ಶ್ರೀ ಕೃಷ್ಣ ನ ಶೋಭಾಯಾತ್ರೆಯು ಚೆಂಡೆ ಮತ್ತು ಸಿಡಿಮದ್ದುಗಳೊಂದಿಗೆ ವಿಜೃಂಭಣೆಯಿಂದ ಮೊಸರು ಕುಡಿಕೆ ಉತ್ಸವ ನಡೆಯಿತು.