ನಾಗಶ್ರೀ ಮಿತ್ರವೃಂದ ಕಮ್ಮಾಜೆ ೨೨ನೇ ವರ್ಷದ ಮೊಸರು ಕುಡಿಕೆ ಉತ್ಸವ
ಕೈಕಂಬ: ನಾಗಶ್ರೀ ಮಿತ್ರವೃಂದ ಹಾಗೂ ನಾಗಶ್ರೀ ಮಾತ್ರವೃಂದದ ಸಹಭಾಗಿತ್ವದಲ್ಲಿ ತೆಂಕಬೆಳ್ಳೂರಿನ ಕಮ್ಮಾಜೆಯ ವಿವೇಕ ಭವನದ ಬಳಿ ಮಾಜಿ ಸೈನಿಕ ಪದ್ಮನಾಭ ಪೊಯ್ಯೆ ಕ್ರೀಡಾಂಗಣದಲ್ಲಿ ಸೆ.೭ ಗುರುವಾರ ೨೨ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವದ ಕ್ರೀಡಾಕೂಟದ ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾದ್ಯಾಯ ಗಂಗಾಧರ ರೈ ಕಮ್ಮಾಜೆ ಉದ್ಘಾಟಿಸಿ ಶುಭಹಾರೈಸಿದರು.
ಬಳಿಕ ಶ್ರೀ ಕಾವೇಶ್ವರ ಭಜನಾ ಮಂಡಳಿ ಹಾಗೂ ಶ್ರೀ ಮಹಾಕಾಳಿ ತುಮಿನಾಡು ಮಂಜೇಶ್ವರ ಇವರಿಂದ ಭಜನೆ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ನಾಗಶ್ರೀ ಮಿತ್ರ ವೃಂದ ಕಮ್ಮಾಜೆ ಗೌರವಾಧ್ಯಕ್ಷ ನಿವೃತ್ತ ಮುಖ್ಯೋಪಾಧ್ಯಾಯ ಅನಂತರಾಮ್ ಹೇರಳ,ನಾಗಶ್ರೀ ಭವನ ಕಟ್ಟಡದ ಸ್ಥಳ ದಾನಿ ನಾರಾಯಣ ಪಿ.ಪಿ,ಬಡಗಬೆಳ್ಳೂರು ಗ್ರಾಂ.ಪಂ.ನ ಉಪಾಧ್ಯಕ್ಷ ಚಂದ್ರಹಾಸ ಅಜಿನಡ್ಕ,ವರಕೋಡಿ ಯಕ್ಷಕಲಾ ಸಂಘದ ಅಧ್ಯಕ್ಷ ಕೇಶವ ನಾಳಿಮಾರ್,ಕೊಪ್ಪಳ ಶಿವಾಜಿ ಗೆಳೆಯರ ಬಳಗದ ಅಧ್ಯಕ್ಷ ರುಕ್ಮಯಾ ಪೂಜಾರಿ,ಗಡಿಕಲ್ಲು ಅಜಿನಡ್ಕ ಜೈ ತುಳುನಾಡು ಫ್ರೆಂಡ್ಸ್ನ ಅಧ್ಯಕ್ಷ ದಿನೇಶ್ ಸುವರ್ಣ ಮುಂಡಡ್ಕ,ಕಾವೇಶ್ವರ ಭಕ್ತವೃಂದ ಬಟ್ಟಾಜೆಯ ಅಧ್ಯಕ್ಷ ದಿನೇಶ್ ಬಟ್ಟಾಜೆ,ರಘುವೀರ್ ಆಚಾರ್ಯ ಗರ್ಗಲ್,ಉದ್ಯಮಿ ಕುಶ ಕುಮಾರ್ ಸಾಣಕಟ್ಟ ಬೆಳ್ಳೂರು ಉಪಸ್ಥಿತರಿದ್ದರು.
ಭವ್ಯ ಶ್ರೀ ಸ್ವಾಗತಿಸಿ,ರಂಜಿತ್ ರೈ ವಂದಿಸಿ,ಸುರೇಶ್ ನಾವುರ ಕಾರ್ಯಕ್ರಮ ನಿರೂಪಿಸಿದರು.