ಅಮ್ಮುಂಜೆ ಗ್ರಾಮ ಪಂಚಾಯತ್ ವಾರ್ಷಿಕ ಜಮಾಬಂದಿ ಕಾರ್ಯಕ್ರಮ
ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮ ಪಂಚಾಯತ್‌ನ ೨೦೨೨-೨೦೨೩ನೇ ಸಾಲಿನ ಜಮಾಬಂದಿ ಕಾರ್ಯಕ್ರಮವು ಸೆ.೧೩ರಂದು ಬುಧವಾರ ಗಂಟೆ ೧೦:೩೦ಕ್ಕೆ ಅಮ್ಮುಂಜೆ ಗ್ರಾಮ್ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.
ಅಮ್ಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ,ಉಪಾಧ್ಯಕ್ಷ ರಾಧಕೃಷ್ಣ ತಂತ್ರಿ ಪೊಳಲಿ,ಪಂ.ಅ.ಅಧಿಕಾರಿ ನಯನ ಕುಮಾರಿ,ಕಾರ್ಯದರ್ಶಿ ಕವಿತಾ ಇವರ ಉಪಸ್ಥಿತಿಯೊಂದಿಗೆ ಜಮಾಬಂದಿಯಲ್ಲಿ ಪಂಚಾಯತಿಯು ರೂಪಿಸಿರುವ ಅಭಿವೃದ್ದಿ ಕಾರ್ಯಕ್ರಮಗಳ ಭೌತಿಕ ಮತ್ತು ಆರ್ಥಿಕ ಪರಿಶೀಲನೆ ಮಾಡಬಹುದಾಗಿದ್ದು,ತತ್ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಬಹುದಾಗಿದೆ.
ಜಮಾಬಂದಿ ಕಾರ್ಯಕ್ರಮಕ್ಕೆ ಅಮ್ಮುಂಜೆ ಗ್ರಾಮದ ಗ್ರಾಮಸ್ಥರು ಸೂಕ್ತ ಸಲಹೆಗಳನ್ನು ನೀಡಿ ಜಮಾಬಂದಿಯನ್ನು ಯಶಸ್ವಿಗೊಳಿಸಬೇಕೆಂದು ಅಮ್ಮುಂಜೆ ಗ್ರಾಮ ಪಂಚಾಯತ್‌ನ ಪ್ರ‍್ರಕಟಣೆಯಲ್ಲಿ ತಿಳಿಸಿದ್ದಾರೆ.