ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮ ಪಂಚಾಯತ್‌ನ ೨೦೨೨-೨೦೨೩ನೇ ಸಾಲಿನ ಜಮಾಬಂದಿ ಕಾರ್ಯಕ್ರಮವು ಸೆ.೧೧ರಂದು ಸೋಮವಾರ ೧೧ಗಂಟೆಗೆ ಕರಿಯಂಗಳ ಗ್ರಾಮ್ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.
ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧ,ಉಪಾಧ್ಯಕ್ಷ ರಾಜು ಕೋಟ್ಯಾನ್,ಪಂ.ಅ.ಅಧಿಕಾರಿ ಬಿ.ವಿ.ಮಾಲಿನಿ,ಭಾರತಿ ಇವರ ಉಪಸ್ಥಿತಿಯಲ್ಲಿ ಜಮಾಬಂದಿಯಲ್ಲಿ ಪಂಚಾಯತಿಯು ರೂಪಿಸಿರುವ ಅಭಿವೃದ್ದಿ ಕಾರ್ಯಕ್ರಮಗಳ ಭೌತಿಕ ಮತ್ತು ಆರ್ಥಿಕ ಪರಿಶೀಲನೆ ಮಾಡಬಹುದಾಗಿದ್ದು,ತತ್ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಬಹುದಾಗಿದೆ.

ಜಮಾಬಂದಿ ಕಾರ್ಯಕ್ರಮಕ್ಕೆ ಕರಿಯಂಗಳ ಗ್ರಾಮದ ಗ್ರಾಮಸ್ಥರು ಸೂಕ್ತ ಸಲಹೆಗಳನ್ನು ನೀಡಿ ಜಮಾಬಂದಿಯನ್ನು ಯಶಸ್ವಿಗೊಳಿಸಬೇಕೆಂದು ಕರಿಯಂಗಳ ಗ್ರಾಮ ಪಂಚಾಯತ್‌ನ ಪ್ರ‍್ರಕಟಣೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *