ಗುರುಪುರ ʼಹೋಟೆಲ್ ಜನತಾ’ಗೆ ೫೦ ; ಸ್ಥಾಪಕರಿಗೆ ನೂರು !ಗ್ರಾಹಕರಿಗೆ ಉಚಿತ ಚಾಹ-ತಿಂಡಿ ನೀಡಿ ಸಂಭ್ರಮ
ಕೈಕಂಬ: ಗುರುಪುರ ಜಂಕ್ಷನ್‌ನಲ್ಲಿರುವ ʼಹೋಟೆಲ್ ಜನತಾ’ ಇಂದಿಗೆ ಐದು ದಶಕಗಳಲ್ಲಿ ನಿರಂತರ ಗ್ರಾಹಕ ಸ್ನೇಹಿಯಾಗಿ ಮುಂದುವರಿದಿದ್ದರೆ ಇದರ ಮಾಲಕ ಕಟ್ಟಾ ಹಿಂದೂವಾದಿ ದಿ.ಕೃಷ್ಣ ಅಣ್ಣಪ್ಪ ಕಾಮತ್ ಅವರಿಗೆ ನೂರರ ಸಂಭ್ರಮ.ಈ ಹಿನ್ನೆಲೆಯಲ್ಲಿ ಸೆ. ೭ರಂದು ಹೋಟೆಲ್‌ಗೆ ಬಂದ ಎಲ್ಲ ಗ್ರಾಹಕರಿಗೆ ಉಚಿತ ಚಾಹ-ಕಾಫಿ ತಿಂಡಿ ನೀಡಿರುವುದು ಎಲ್ಲೆಡೆ ಪ್ರಸಂಶೆಗೆ ಪಾತ್ರವಾಗಿದೆ.

ಹೆಸರಿಗೆ ಹೋಟೆಲ್ ಜನತಾ ಆಗಿದ್ದರೂ
ʼಕಿಟ್ಟೆರ್ನ’ ಹೋಟೆಲ್ ಎಂದು ಇಂದಿಗೂ ಜನಪ್ರಿಯವಾಗಿದೆ.ಜನತಾ ಹೋಟೆಲ್ ನಲ್ಲಿ ದುಬಾರಿ ಅಲ್ಲದ ದರ,ತಿಂಡಿ-ತಿನಸುಗಳಾದ ಅಂಬಡೆ,ದೋಸೆ,ಪೋಡಿ,ನೀರುಳ್ಳಿ ಬಜೆ,ಬಟಟೆಂಬಡೆ,ಗೋಳಿಬಜೆ ಇವುಗಳ ರುಚಿಯನ್ನು ಅನುಭವಿಸಿದ ಗ್ರಾಹಕರು ದೂರದೂರಿಂದ ಚಹಾ-ತಿಂಡಿಗಳಿಗಾಗಿ ಪುನಃ ಭೇಟಿ ನೀಡುವ ಜನರಿದ್ದಾರೆ .
ಹಳ್ಳಿಗಾಡಿನ ಹೋಟೆಲ್‌ಗಳಲ್ಲೂ ಗ್ಯಾಸ್ ಸಿಲಿಂಡರ್ ಬಳಸಿ ಅಡುಗೆ ಮಾಡಲಾಗುತ್ತಿದ್ದರೂ,ಇಲ್ಲಿ ಇಂದು ಕೂಡ ಕಟ್ಟಿಗೆ ಒಲೆಯಲ್ಲಿ ತಿಂಡಿ ಸಿದ್ಧಪಡಿಸಲಾಗುತ್ತಿದೆ.ಮಂಗಳೂರು-ಮೂಡಬಿದ್ರೆ ರಾಷ್ಟ್ರೀಯ ಹೆದ್ದಾರಿ ೧೬೯ರಲ್ಲಿರುವುದರಿಂದ ಹೋಟೆಲ್ ದಿನಪೂರ್ತಿ ಗ್ರಾಹಕರಿಂದ ತುಂಬಿರುತ್ತದೆ.
ಕೃಷ್ಣ ಅಣ್ಣಪ್ಪ ಕಾಮತರ ನಿಧನದ ಬಳಿಕ ಅವರ ಪುತ್ರರಾದ ವಿಠಲದಾಸ್ ಕಾಮತ್ ಮತ್ತು ವಿಷ್ಣು ಕಾಮತ್ ಹಾಗೂ ಮೊಮ್ಮಕ್ಕಳಾದ ಸುಧೀರ್ ಕಾಮತ್ ಮತ್ತು ವಿಜಯೇಂದ್ರ ಕಾಮತ್ ಹೋಟೆಲ್ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ.ಈಗಲೂ ಹೋಟೆಲ್‌ನಲ್ಲಿ ಕಿಟ್ಟೆರ್ನ ಚಾರ್ಮ್ ಉಳಿದುಕೊಂಡಿದೆ.
ಹೋಟೆಲ್‌ನ ಶುಚಿ-ರುಚಿಯಾದ ತಿಂಡಿ ತಿನಸುಗಳಲ್ಲಿ ಕಾಮತ್‌ರ ಮನೆಯ ಹೆಂಗಳೆಯರ ಕೈವಾಡವಿದೆ ಎಂಬುದು ಬಹಳಷ್ಟು ಗ್ರಾಹಕರಿಗೆ ತಿಳಿದೇ ಇಲ್ಲ.ನಮ್ಮ ಊರಿನಲ್ಲಿ ಕಿಟ್ಟೆರ್ನ ಹೋಟೆಲ್ ಗೆ ಹೋಗದವರೇ ಇಲ್ಲ ಆದರೆ ನೀವು ಒಮ್ಮೆ ಭೇಟಿ ಕೊಟ್ಟು ತಿಂಡಿಯ ರುಚಿಯನ್ನು ಸವಿದು ನೋಡಿ ಆಗ ನಿಮಗೂ ನಮ್ಮ ಮಾತು ಸರಿಯೆನಿಸುತ್ತದೆ.