ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳದ ಸಾಧಕರು
ಬಂಟ್ವಾಳ: ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ – ವಿದ್ಯಾಭಾರತಿ ಕರ್ನಾಟಕ, ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇದರ ಸಹಯೋಗದಲ್ಲಿ ನಡೆದ ಜಿಲ್ಲಾಮಟ್ಟದ ಗಣಿತ – ವಿಜ್ಞಾನ ಹಾಗೂ ಸಂಸ್ಕೃತಿ ಜ್ಞಾನ ಪರಿಚಯ ಸ್ಪರ್ಧೆಯಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು.
ಬಾಲವರ್ಗದ ಗಣಿತ ಮಾದರಿ ಪ್ರದರ್ಶನದಲ್ಲಿ ಸಮ ಬಹುಭುಜಾಕೃತಿಗಳ ಗುಣಧರ್ಮಗಳ ಮೇಲೆ ಆಧಾರಿತ ಪ್ರದರ್ಶನ ಎಂಬ ವಿಷಯದಲ್ಲಿ ೬ನೇ ತರಗತಿಯ ಭೂಮಿಕಾ ಪ್ರಥಮ ಸ್ಥಾನ, ಕ್ಷೇತ್ರಫಲ ಹಾಗೂ ಆಯತದ ಮಿತಿಯನ್ನು ಸ್ಪಷ್ಟಗೊಳಿಸುವ ಪ್ರದರ್ಶನ ಎಂಬ ವಿಷಯದಲ್ಲಿ ೬ನೇ ತರಗತಿಯ ರಾಜೇಶ್ವರಿ ಭಟ್ ಪ್ರಥಮ ಸ್ಥಾನ, ಸಂಶೋಧನಾರ್ಹ ಪ್ರದರ್ಶನದಲ್ಲಿ ೬ನೇ ತರಗತಿಯ ಪಿ. ಸುಶ್ಮಿತಾ ಭಟ್ ಪ್ರಥಮ ಸ್ಥಾನ, ಸಂಸ್ಕೃತಿ ಜ್ಞಾನ ರಸಪ್ರಶ್ನೆಯಲ್ಲಿ ೭ನೇ ತರಗತಿಯ ಪ್ರಜ್ಞಾ, ಸಾನ್ವಿ ಕಾಮತ್, ವೈಷ್ಣವಿ ಕಡ್ಯ ಪ್ರಥಮ ಸ್ಥಾನ, ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ವಾಯು ಒತ್ತಡ ಆಧಾರಿತ ಪ್ರತಿರೂಪ ಎಂಬ ವಿಷಯದಲ್ಲಿ ೭ನೇ ತರಗತಿಯ ಶ್ರೇಯಾ ಎಂ.ಜೆ ಪ್ರಥಮ ಸ್ಥಾನ, ಮಳೆ ನೀರು ಸಂರಕ್ಷಿತ ಆಧಾರಿತ ಪ್ರತಿರೂಪ ಎಂಬ ವಿಷಯದಲ್ಲಿ ೭ನೇ ತರಗತಿಯ ಅಮೂಲ್ಯ ಡಿ.ಎಸ್ ಮತ್ತು ೬ನೇ ತರಗತಿಯ ಶ್ರೀನಿಧಿ ಪ್ರಥಮ ಸ್ಥಾನ ಪಡೆದು, ಕಲ್ಬುರ್ಗಿಯಲ್ಲಿ ನಡೆಯುವ ಪ್ರಾಂತಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಗಣಿತ ಲೇಖನ ಹಾಗೂ ವಾಚನದಲ್ಲಿ ೭ನೇ ತರಗತಿ ವೈಷ್ಣವಿ ಕಡ್ಯ ದ್ವಿತೀಯ ಸ್ಥಾನ, ಕಥಾಕಥನದಲ್ಲಿ ೭ನೇ ತರಗತಿಯ ವೈಷ್ಣವಿ ಕಾಮತ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಶಿಶುವರ್ಗದ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ನೈಸರ್ಗಿಕ ವಿಕೋಪಗಳ ಆಧಾರಿತ ಮಾದರಿ ಎಂಬ ವಿಷಯದಲ್ಲಿ ೪ನೇ ತರಗತಿಯ ಮನ್ವಿತ್ ಪ್ರಥಮ ಸ್ಥಾನ, ಸಾರಿಗೆ ಸಂಪರ್ಕ ಎಂಬ ವಿಷಯದಲ್ಲಿ ೫ನೇ ತರಗತಿಯ ಸಮರ್ಥ ಪ್ರಥಮ ಸ್ಥಾನ, ಪರ್ಯಾವರಣ ಸ್ವಚ್ಛತೆ ಆಧಾರಿತ ಪ್ರತಿರೂಪ ಎಂಬ ವಿಷಯದಲ್ಲಿ ೪ನೇ ತರಗತಿಯ ಪ್ರದ್ಯೂತ್ ದ್ವಿತೀಯ ಸ್ಥಾನ, ಸೃಜನಾತ್ಮಕ ಪ್ರತಿರೂಪ – ಬಹುಪಯೋಗಿ ಗಾಲಿಕುರ್ಚಿ ಎಂಬ ವಿಷಯದಲ್ಲಿ ೫ನೇ ತರಗತಿಯ ಸಮೃದ್ಧ್ ತೃತೀಯ ಸ್ಥಾನ, ಗಣಿತ ಮಾದರಿ ಪ್ರದರ್ಶನದಲ್ಲಿ ಸಂಶೋಧನಾರ್ಹ ಪ್ರದರ್ಶನ ಎಂಬ ವಿಷಯದಲ್ಲಿ ೪ನೇ ತರಗತಿಯ ಸ್ಕಂದತೇಜ ದ್ವಿತೀಯ ಸ್ಥಾನ, ಆಧಾರಭೂತ ಸಂಕ್ರಿಯೆಯಲ್ಲಿ ೫ನೇ ತರಗತಿಯ ತನ್ಮಯಿ ರೈ ತೃತೀಯ ಸ್ಥಾನ, ವೇದಗಣಿತ ರಸಪ್ರಶ್ನೆಯಲ್ಲಿ ೫ನೇ ತರಗತಿಯ ಅಪ್ರಮೇಯ, ಸ್ವಸ್ತಿಕ್ ಎಸ್, ರಾಮ್ ಸ್ವರೂಪ್ ಪ್ರಥಮ ಸ್ಥಾನ, ಸಂಸ್ಕೃತಿ ಜ್ಞಾನ ರಸಪ್ರಶ್ನೆಯಲ್ಲಿ ೫ನೇ ತರಗತಿಯ ಅನಿರುದ್ಧ್, ಧನ್ಯ, ಪ್ರಾಪ್ತಿ ತೃತೀಯ ಸ್ಥಾನ, ಕಥಾಕಥನದಲ್ಲಿ ೪ನೇ ತರಗತಿಯ ಅನ್ವೇಷ್ ಪ್ರಭು ತೃತೀಯ ಸ್ಥಾನ ಹಾಗೂ ವಿಜ್ಞಾನ ಪ್ರಯೋಗದಲ್ಲಿ ೪ನೇ ತರಗತಿಯ ಶ್ರೀರಾಮ ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ.
ಸಂಸ್ಕೃತಿ ಜ್ಞಾನ ಪರಿಚಯ – ಜಾನಪದ ನೃತ್ಯ ಸ್ಪರ್ಧೆಯಲ್ಲಿ ದೀಪಶ್ರೀ, ಶರಣ್ಯ, ನಿಶಾ, ಕೃಪಾ, ಗಾನವಿ, ರಕ್ಷಾ, ಧಾತ್ರಿ, ಜಾನ್ವಿ ಎಸ್ಪಿ.ಪಿ ತೃತೀಯ ಸ್ಥಾನ ಪಡೆದುಕೊಂಡರು. ಇವರಿಗೆ ಹಾಡಿನಲ್ಲಿ ಧಾತ್ರಿ, ಭುವಿ, ದಿಶಾ, ಚಿಂತನಾ ಹಾಗೂ ತಾಸೆಯಲ್ಲಿ ಮುರಳೀಧರ ಹಾಗೂ ದೀವಿತ್ ಸಹಕರಿಸಿದರು.ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳದಲ್ಲಿ ಪ್ರಾಥಮಿಕ ವಿಭಾಗವು ೯ ಪ್ರಥಮ ಸ್ಥಾನ, ೪ ದ್ವಿತೀಯ ಸ್ಥಾನ ಹಾಗೂ ೬ ತೃತೀಯ ಸ್ಥಾನ ಪಡೆದು ಒಟ್ಟು ೧೯ ಬಹುಮಾನವನ್ನು ತನ್ನದಾಗಿಸಿಕೊಂಡಿದೆ.
ಇವರಿಗೆ ವಿದ್ಯಾಕೇಂದ್ರದ ಅಧ್ಯಕ್ಷರು, ಸಂಚಾಲಕರು, ಆಡಳಿತ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ ಮತ್ತು ಅಧ್ಯಾಪಕೇತರರು ಅಭಿನಂದಿಸಿದರು