ಬಂಟ್ವಾಳ ತಾಲೂಕು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಸೋಮಯ್ಯ ಮೂಲ್ಯ ಆಯ್ಕೆ
ಬಂಟ್ವಾಳ: ಬಿ.ಸಿ.ರೋಡಿಗೆ ಸಮೀಪದ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷರಾದ ಶೇಷಪ್ಪ ಮಾಸ್ಟರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಬಂಟ್ವಾಳ ತಾಲೂಕು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಸೋಮಯ್ಯ ಮೂಲ್ಯ ಆಯ್ಕೆಯಾಗಿದ್ದಾರೆ.
ಉಳಿದಂತೆ ಆಯ್ಕೆಯಾದ ಪದಾಧಿಕಾರಿಗಳು ಗೌರವಾಧ್ಯಕ್ಷರಾಗಿ ಟಿ ಶೇಷಪ್ಪ ಮಾಸ್ಟರ್,ಪ್ರಧಾನ ಕಾರ್ಯದರ್ಶಿಯಾಗಿ ಪದ್ಮನಾಭ ಎಂ,ಉಪಾಧ್ಯಕ್ಷರು ರತ್ನಾವತಿ ಶೀನ ಮೂಲ್ಯ ಅಲ್ಲಿಪಾದೆ,ಕೋಶಧಿಕಾರಿ ಸೋಮಪ್ಪ ಮೂಲ್ಯ,ಸಂಘಟನಾ ಕಾರ್ಯದರ್ಶಿ ಕಿಟ್ಟು ಮೂಲ್ಯ ,ಜತೆ ಕಾರ್ಯದರ್ಶಿ ಶ್ರೀನಿವಾಸ್ , ಕಾರ್ಯಕಾರಿ ಸಮಿತಿ ಸದಸ್ಯರಾಗಿ ದಿನಕರ್, ಓಬಯ್ಯಾ ಮೂಲ್ಯ, ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸಭೆಯಲ್ಲಿ ಸದಸ್ಯರಾದ ನೀಲಪ್ಪ ಸಾಲಿಯಾನ್,ವಿಠ್ಠಲ್ ಸಾಲಿಯಾನ್ ಜಕ್ರಿಬೆಟ್ಟು, ವಿಶ್ವನಾಥ ಸಾಲಿಯಾನ್ ಸೋರ್ನಾಡ್, ಶ್ರೀಮತಿ ರೋಹಿಣಿ, ಶ್ರೀಮತಿ ಶಾಂಭವಿ ಸೋಮಯ್ಯ, ರಾಮಣ್ಣ ಮರ್ದೋಳಿ, ಕೃಷ್ಣಪ್ಪ ಬಡ್ಡಕಟ್ಟೆ ಉಪಸ್ಥಿತರಿದ್ದರು.