ಬಂಟ ಸಮಾಜದ ಶಾಸಕರು, ಎಂಎಲ್‌ಸಿಗಳಿಗೆ ಗೌರವಾರ್ಪಣೆ
ಬಂಟ್ವಾಳ: ತಾಲೂಕು ಬಂಟರ ಸಂಘವು ಸಂಘಟನೆ ಜತೆಗೆ ಕ್ರೀಡೆ-ಸಾಂಸ್ಕೃತಿಕವಾಗಿ ಸಮಾಜವನ್ನು ಜೋಡಿಸುತ್ತಿದ್ದು, ಆದರ್ಶ ಕಾರ್ಯಕ್ರಮಗಳ ಮೂಲಕ ಮಾದರಿಯಾಗಿ ಯಾವುದೇ ಬೇಧವಿಲ್ಲದೆ ವಿದ್ಯಾರ್ಥಿವೇತನ ನೀಡುವುದು ಭವಿಷತ್ತಿಗೆ ಬೆಳಕನ್ನು ನೀಡುವ ಕಾರ್ಯ ಎಂದು ದ.ಕ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.

ಬ್ರಹ್ಮರಕೊಟ್ಲುವಿನಲ್ಲಿರುವ ಬಂಟವಾಳದ ಬಂಟರ ಭವನದಲ್ಲಿ ತಾಲೂಕು ಬಂಟರ ಸಂಘದ ವತಿಯಿಂದ ಬಂಟ ಸಮಾಜದ ಶಾಸಕರು, ವಿ.ಪ. ಸದಸ್ಯರಿಗೆ ನಡೆದ ಗೌರವಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿ ಮಾಜಿ ಸಚಿವ ಬಿ. ರಮಾ ನಾಥ ರೈ ಮಾತನಾಡಿ, ಸಮಾಜಮುಖಿ ಕಾರ್ಯಗಳ ಮೂಲಕ ನಾಯಕತ್ವ ಗುಣವನ್ನು ಬೆಳೆಸಿಕೊಂಡಿರುವ ಬಂಟ ಸಮಾಜವು ಮಾತೃ ಪ್ರಧಾನವಾಗಿ ಮಹಿಳೆಯರಿಗೂ ವಿಶೇಷ ಗೌರವ ನೀಡುತ್ತಾ ಬಂದಿದೆ ಎಂದರು.
ಶಾಸಕ ರಾಜೇಶ್ ನೈಕ್ ಉಳಿಪ್ಪಾಡಿಗುತ್ತು, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಮಂಗಳೂರು ಬೆಳೆದಿದೆ. ಉತ್ತರ ಶಾಸಕ ಡಾ.ವೈ. ಭರತ್ ಶೆಟ್ಟಿ, ವಿ.ಪ. ಸದಸ್ಯರಾದ ಡಾ. ಮಂಜುನಾಥ್ ಭಂಡಾರಿ, ಭಾರತಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ಹಾಗೆಯೇ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸ ಲಾಯಿತು, ಸಂಚಾಲಕ ಎಚ್. ಸಂಕಪ್ಪ ಶೆಟ್ಟಿ ಅವರು ವಿದ್ಯಾರ್ಥಿಗಳ ವಿವರ ನೀಡಿದರು.
ಸಂಘದ ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ, ಜತೆ ಕಾರ್ಯದರ್ಶಿ ರಂಜನ್ ಕುಮಾರ್ ಶೆಟ್ಟಿ, ಜತೆ ಕೋಶಾಧಿಕಾರಿ ಪ್ರತಿಭಾ ಎ. ರೈ, ಮಹಿಳಾ ಸಮಿತಿಯ ಅಧ್ಯಕ್ಷೆ ರಮಾ ಎಸ್. ಭಂಡಾರಿ, ಯುವ ವಿಭಾಗದ ಅಧ್ಯಕ್ಷ ನಿಶಾನ್ ಆಳ್ವ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ ಸ್ವಾಗತಿಸಿ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಬಾಲಕೃಷ್ಣ ಆಳ್ವ ಕೊಡಾಜೆ ನಿರ್ವಹಿಸಿದರು.