Published On: Mon, Aug 28th, 2023

ಸಾವರ್ಕರ್ ಗೆ ಅವಮಾನ ಖಂಡಿಸಿ ಸೆ.3 ಕ್ಕೆ ಮಂಚಿಯಲ್ಲಿ ಹಿಂದು ಜನಜಾಗೃತಿ ಸಮಾವೇಶ

ಬಂಟ್ವಾಳ: ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ ಅವಮಾನವನ್ನು ಖಂಡಿಸಿ ಹಿಂದು ಜನಜಾಗೃತಿ ಸಮಾವೇಶ ಸೆ.3ರಂದು ಮಂಚಿ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ವಿಶ್ವ ಹಿಂದು ಪರಿಷತ್ ,ಬಜರಂಗದಳ ಬಂಟ್ವಾಳ ಪ್ರಖಂಡ ತಿಳಿಸಿದೆ.

 

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿ.ಹಿ.ಪ.ನ ಬಂಟ್ವಾಳ ಪ್ರಖಂಡ ಅಧ್ಯಕ್ಷ,ನ್ಯಾಯವಾದಿ ಪ್ರಸಾದ್ ಕುಮಾರ್ ರೈ,ಮಂಚಿ ಸರಕಾರಿ ಶಾಲೆಯೊಂದರಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಗೆ ಜೈಕಾರ  ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಶಾಲೆಗೆ ಸಂಬಂಧ ಪಡದ ವ್ಯಕ್ತಿಯೋರ್ವ ಅಲ್ಲಿನ ಮುಖ್ಯ ಶಿಕ್ಷಕಿಗೆ ಬೆದರಿಕೆ ಹಾಕಿದ್ದಲ್ಲದೆ ಕ್ಷಮೆ ಕೇಳುವಂತೆ ಮಾಡಿ ಅದರ ವಿಡಿಯೋ ವನ್ನು  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಘಟನೆ ಖಂಡನೀವಾಗಿದ್ದು, ಪೋಲೀಸರು ಆತನ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

  ಸ್ವಾತಂತ್ರ್ಯ ಚಳುವಳಿಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡು ಎರಡೆರಡು ಬಾರಿ ಕರಿನೀರಿನ ಶಿಕ್ಷೆ ಅನುಭವಿಸಿದ ಸಾವರ್ಕರ್ ಹಾಗೂ ಹಿಂದೂ ಸಮಾಜ ಮತ್ತು  ದೇಶಕ್ಕಾಗಿ ಸರ್ವಸ್ವವನ್ನು ಮುಡಿಪಾಗಿಟ್ಟ ಸಾವರ್ಕರ್ ಮತ್ತು ಅವರ ಕುಟುಂಬದ ಬಗ್ಗೆ ತುಚ್ಚವಾಗಿ ಮಾತನಾಡಿದರೆ ಸಹಿಸಲು ಸಾಧ್ಯವೇ ಇಲ್ಲ ಎಂದರು.

ಸಾವರ್ಕರ್ ಅವರಿಗೆ ಮಾಡಿದ ಅವಮಾನವನ್ನು ಖಂಡಿಸಿ ಮಂಚಿ ಮತ್ತು ಸುತ್ತಮತ್ತಲಿನ ಗ್ರಾಮದ ಪ್ರತಿ ಹಿಂದೂ ಸಮಾಜದ ಮನೆಗೂ ವೀರ ಸಾವರ್ಕರ್ ಭಾವಚಿತ್ರವನ್ನು ಹಚ್ಚುವ ಹಾಗೂ ಅವರ ಜೀವನ ಚರಿತ್ರೆಯ ಪುಸ್ತಕವನ್ನು ವಿತರಿಸಲು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕಲ್ಲಡ್ಕ ಪ್ರಖಂಡದ ಅಧ್ಯಕ್ಷ ಸಚಿನ್ ಮೆಲ್ಕಾರ್ ಅವರು ಈ ಸಂದರ್ಭದಲ್ಲಿ ವಿವರಿಸಿದರು.

ಸಮಾವೇಶಕ್ಕೆ ಮುನ್ನ ಮಧ್ಯಾಹ್ನ 3 ಗಂಟೆಗೆ ಕುಕ್ಕಾಜೆ ಸಿದ್ಧಿವಿನಾಯಕ ಮಂದಿರದಿಂದ ಕಾರ್ಯಕ್ರಮ ಸ್ಥಳಕ್ಕೆ ಬೈಕ್ ಜಾಥ ನಡೆಯಲಿದೆ. ಮಂಚಿ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ದಿಕ್ಸೂಚಿ ಭಾಷಣ ಮಾಡುವರು. ಮುಖ್ಯ ಅತಿಥಿಯಾಗಿ ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್, ವಿಹಿಂಪ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ಅತಿಥಿಗಳಾಗಿ ಭಾಗವಹಿಸುವರು. ಅಧ್ಯಕ್ಷತೆಯನ್ನು ನಿವೃತ್ತ ಸೈನಿಕ ರಮೇಶ್ ರಾವ್ ನೂಜಿಪ್ಪಾಡಿ ವಹಿಸುವರು ಎಂದು ಅವರು ವಿವರಿಸಿದರು.

ವಿಶ್ವಹಿಂದೂ ಪರಿಷದ್ ಭಜರಂಗದಳ ಜಿಲ್ಲಾ ಸಂಯೋಜಕ‌ ಭರತ್ ಕುಮ್ಡೆಲು ಮಾತನಾಡಿ, 2024 ರ ವೇಳೆಗೆ ಭಾರತವನ್ನು ಮುಸ್ಲಿಂ ರಾಷ್ಟ್ರಮಾಡಬೇಕಂಬ  ಅವರ ಉದ್ದೇಶದ  ಮುಂದುವರಿದ ಭಾಗವಾಗಿ ಮಂಚಿಯಲ್ಲಿ ಸಾವರ್ಕರ್ ಗೆ ಅವಮಾನ ಮಾಡಲಾಗಿದೆ ಎಂದ ಅವರು ಈ ನಡುವೆ ರಾಜ್ಯ ಸರಕಾರ ಕೂಡ ದುರುದ್ದೇಶಪೂರಿತವಾಗಿ ಶಾಲಾ ಪಠ್ಯ ಪುಸ್ತಕದಿಂದ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಪಾಠವನ್ನು ತೆಗೆಯಲು ಹೊರಟಿದ್ದು,ಇದನ್ನು ಸಹಿಸಲು ಸಾಧಗಯವಿಲ್ಲ,ಇದರ ವಿರುದ್ಧ ಕೂಡ ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಸಲಾಗುವುದು,ಮಂಚಿಯಲ್ಲಿ ನಡೆಯುವ ಹಿಂದೂ ಜನಜಾಗೃತಿಸಮಾವೇಶ ಇದಕ್ಕೆ ನಾಂದಿಯಾಗಲಿದೆ ಎಂದರು‌.

 ಬಜರಂಗದಳ ವಿಟ್ಲ ಪ್ರಖಂಡ ಅಧ್ಯಕ್ಷ ಚೇತನ್, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಕ.ಕೃಷ್ಣಪ್ಪ, ಮಂಚಿ ಘಟಕಾಧ್ಯಕ್ಷ ರಮೇಶ್ ರಾವ್ ಪತ್ತುಮುಡಿ ಮೊದಲಾದವರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter