ಶ್ರೀನಿಕೇತನ ಮಹಿಳಾ ಜ್ನಾನ ವಿಕಾಸ ಕೇಂದ್ರದ ಉದ್ಘಾಟನೆ
ಬಂಟ್ವಾಳ: ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಬೋಳಂತೂರು ಕಲ್ಲಡ್ಕ ವಲಯ ಇದರ ವತಿಯಿಂದ ಶ್ರೀ.ಕ್ಷೇ.ಧ.ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ಕಲ್ಲಡ್ಕ ವಲಯ ಹಾಗೂ ಸ್ಥಳೀಯ ಸಂಘಸಂಸ್ಥೆಗಳ ನೇತೃತ್ವದಲ್ಲಿ ಬಂಟ್ವಾಳ ತಾಲೂಕು ಬೋಳಂತೂರು ಗ್ರಾಮದ ಶ್ರಿ ಸಿದ್ಧಿವಿನಾಯಕ ಭಜನಾ ಮಂದಿರದ ತುಳಸೀವನದಲ್ಲಿ ಸಾಮೂಹಿಕ ಶ್ರಿ ವರಮಹಾಲಕ್ಷ್ಮಿ ಪೂಜೆ ಹಾಗೂ “ಶ್ರೀನಿಕೇತನ ಮಹಿಳಾ ಜ್ನಾನ ವಿಕಾಸ ಕೇಂದ್ರ” ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಸಮಿತಿಯ ಅಧ್ಯಕ್ಷರಾದ ಸುಧಾಮಣಿ ದಿನೇಶ್ ಪೂಜಾರಿ ಅವರು ಅಧ್ಯಕ್ಷತೆ ವಹಿಸಿದ್ದರು. ಮಂದಿರದ ಗೌರವಾಧ್ಯಕ್ಷರಾದ ಮಾಹಾಬಲ ರೈ ಹೊಸಮನೆ ಬೋಳಂತೂರು ಅವರು ದ್ವೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇವೇಳೆ ವಿಜಯ ಬಿ ಶೆಟ್ಟಿ ಸಾಲೆತ್ತೂರು ಅವರು ಧಾರ್ಮಿಕ ಉಪನ್ಯಾಸಗೈದು ವಿದ್ಯೆ ಇದ್ದರೆ ಸಾಲದು ವಿನಯ,ಉತ್ತಮ ಸಂಸ್ಕಾರವಿದ್ದರೆ ಮಾತ್ರ ಒಳ್ಳೆಯವ್ಯಕ್ತಿಯಾಗಬಹುದು.ಸನಾತನ ಧರ್ಮದಲ್ಲಿ ಮಾತೆಯರಿಗೆ ಪುರಾಣ ಕಾಲದಿಂದಲೂ ಮಾತೆಯರಿಗೆ ಉತ್ತಮ ಸ್ಥಾನ ದೊರೆತಿದೆ.ಅದನ್ನು ಸತ್ಕಾರ್ಯದಲ್ಲಿ ಬಳಸಿ ಉತ್ತಮ ಸಮಾಜ ನಿರ್ಮಾಣ ಮಾಡೋಣ ಎಂದರು.
ಶ್ರೀನಿಕೇತನ ಜ್ಞಾನ ವಿಕಾಸ ಕೇಂದ್ರವನ್ನು ಉದ್ಘಾಟಿಸಿದ ಶ್ರಿ.ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆ ಕೇಂದ್ರ ಘಟಕದ ಯೋಜನಾಧಿಕಾರಿ ಸಂಗೀತ ಅವರು ಜ್ಞಾನವಿಕಾಸ ವಿಭಾಗದ ಮಾಹಿತಿಯನ್ನು ನೀಡಿದರು.ಈ ಸಂದರ್ಭದಲ್ಲಿ ಯೋಜನೆಯ ವತಿಯಿಂದ ಸುಜ್ಞಾನನಿಧಿ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಸೀತಾ ರಾಮಚಂದ್ರ ಆಚಾರ್ಯ ದಂಡೆಮಾರ್ ಹಾಗೂ ಛಾಯಾಗ್ರಾಹಕ ಚಿನ್ನಾ ಮೈರ ವೀರಕಂಭ ಇವರನ್ನು ಸನ್ಮಾನಿಸಲಾಯಿತು. ಶ್ರೀ ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿಯ ಅದ್ಯಕ್ಷ ಮುತ್ತಪ್ಪ ಮೂಲ್ಯ ತುಳಸೀವನ, ಕಲ್ಲಡ್ಕ ವಲಯ ಜನಜಾಗೃತಿ ವೇದಿಕೆಯ ಅದ್ಯಕ್ಷ ಭಟ್ಯಪ್ಪ ಶೆಟ್ಟಿ ನೆಟ್ಲ,ಮಂದಿರದ ಉತ್ಸವ ಸಮಿತಿಯ ಅಧ್ಯಕ್ಷ ಉದಯ ಕುಮಾರ್ ಕೊಕ್ಕಪುಣಿಬೈಲು, ಶ್ರೀ ಸಿದ್ಧಿವಿನಾಯಕ ಮಹಿಳಾ ಮಂಡಳಿ ಹಾಗೂ ಯೋಜನೆಯ ಬೋಳಂತೂರು ಒಕ್ಕೂಟದ ಅಧ್ಯಕ್ಷೆ ಸೀತಾ ರಾಮಚಂದ್ರ ಆಚಾರ್ಯ ದಂಡೆಮಾರು,ಬೋಳಂತೂರು ಪಂಚಾಯತ್ ಮಾಜಿ ಉಪಾಧ್ಯಕ್ಷ ಚಂದ್ರಹಾಸ ರೈ ಬೋಳಂತೂರು, ಶ್ರಿ ಶಾರದಾಂಬ ಭಜನಾ ಮಂಡಳಿ ಶೃಂಗಗಿರಿ ಗುಂಡಿಮಜಲು ಇದರ ಅಧ್ಯಕ್ಷ ಜಯರಾಮ ನಾಯ್ಕ,ಮಹಿಳಾ ಮಂಡಳಿಯ ಅದ್ಯಕ್ಷೆ ಆಶಾಲತಾ,ಯೋಜನೆಯ ಕಲ್ಲಡ್ಕ ವಲಯದ ಅದ್ಯಕ್ಷೆ ತುಳಸಿ ಉಪಸ್ಥಿತರಿದ್ದರು.
ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿಯ ಅಧ್ಯಕ್ಷ ಜಯರಾಮ ರೈ ಬೋಳಂತೂರು ಸ್ವಾಗತಿಸಿ, ಸೇವಾ ಪ್ರತಿನಿಧಿ ರೇಣುಕಾ ಸಂಘದ ವರದಿ ವಾಚಿಸಿ, ಮಮತಾ ಗುಂಡಿಮಜಲುವಂದಿಸಿದರು. ರವೀಶ್ ಆಚಾರ್ಯ ಗಣೇಶ್ ಕೋಡಿ ಹಾಗೂ ಕಲ್ಲಡ್ಕ ವಲಯದ ಮೇಲ್ವಿಚಾರಕರಾದ ಸುಗುಣಾ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮದ ನಂತರ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.