ಪೊಳಲಿಯಲ್ಲಿ ಧರ್ಮಜ್ಯೋತಿ ಪ್ರೆಂಡ್ಸ್ ಸರ್ಕಲ್ ವತಿಯಿಂದ ೧೨ ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ
ಕೈಕಂಬ: ಧರ್ಮಜ್ಯೋತಿ ಪ್ರೆಂಡ್ಸ್ ಸರ್ಕಲ್ ಕಲ್ಕುಟ ಪೊಳಲಿ ಇದರ ೧೨ ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶುಕ್ರವಾರ ನಡೆಯಿತು.
ಜ್ಯೋತಿಷ್ಯ ವಿದ್ವಾನ್ ನೂಯಿ ರಾಜಶೇಖರ್ ರಾವ್ ಅವರು ವರಮಹಾಲಕ್ಷ್ಮೀ ಪೂಜೆಯ ಮಹತ್ವವನ್ನು ತಿಳಿಸಿದರು. ಅರುಣ್ ಕುಮಾರ್ ಪುತ್ತಿಲ ವರಮಹಾಲಕ್ಷ್ಮೀ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಪುತ್ತಿಲ ಅವರನ್ನು ಧರ್ಮಜ್ಯೋತಿ ಫ್ರೆಂಡ್ಸ್ ವತಿಯಿಂದ ಗೌರವಿಸಲಾಯಿತು.
ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕ ಚೈತನ್ಯಾನಂದ ಉಪಸ್ಥಿತರಿದ್ದರು. ನೂರಾರು ಮಹಿಳೆಯರು ಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.