ಕುಲಾಲ ಸೇವಾ ಸಂಘ ಹಾಗೂ ತುಂಬೆ ಮಹಿಳಾ ಘಟಕದ “ಆಟಿದ ನೆನಪು”ಮತ್ತು ವಾರ್ಷಿಕ ಮಹಾಸಭೆ
ಬಂಟ್ವಾಳ: ಕುಲಾಲ ಸೇವಾ ಸಂಘ ಹಾಗೂ ಮಹಿಳಾ ಘಟಕ ತುಂಬೆ ಇದರ 9ನೇ ವರ್ಷದ “ಆಟಿದ ನೆನಪು”ಮತ್ತು ವಾರ್ಷಿಕ ಮಹಾಸಭೆಯು ನಡೆಯಿತು.ಗುರುವಾಯನಕೆರೆ ಕುಲಾಲ ಸಂಘದ ಕಟ್ಟಡ ಸಮಿತಿ ಅಧ್ಯಕ್ಷರಾದ ಸೋಮಯ್ಯ ಮೂಲ್ಯ ಹನೈನಡೆ ಅವರು ಉದ್ಘಾಟಿಸಿ ಮಾತನಾಡಿ, ತುಳುನಾಡ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಅಟಿಯ ನೆನಪು ಸಹಿತ ಸಮಾಜಮುಖಿ ಚಟುವಟಿಕೆಗಳ ಮೂಲಕ ಇತರೆ ಸಂಘಗಳಿಗೆ ಮಾದರಿಯಾಗಿದೆ ಎಂದರು.
ಸಂಘದ ಅಧ್ಯಕ್ಷರಾದ ಶಿವಕುಮಾರ ದಂಪತಿಗಳು ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು. ಮಧ್ಯಾಹ್ನ ಸಂಘದ ಸದಸ್ಯರು ತಯಾರಿಸಿದ ವಿವಿಧ ಬಗೆಯ ಖಾದ್ಯಗಳನ್ನು ಎಲ್ಲರೂ ಸವಿದರು. ನಂತರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಂಗಳೂರು ಪದಿವಾ ಕಾಲೇಜಿನ ಉಪನ್ಯಾಸಕಿ ರೇಷ್ಮಾ ವಿನಯ್ , ಮನೋಜ್ ಕುಲಾಲ್ ಸಿದ್ದಕಟ್ಟೆ,ಕುಲಾಲ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ್, ಮಹಿಳಾ ಘಟಕದ ಅಧ್ಯಕ್ಷೆ ಲತಾ ಗೋಪಾಲ್,ಗೋಪಾಲ್ ಗೋವಿಂತೋಟ ಭಾಗವಹಿಸದ್ದರು. ಶೋಭಾ ಸದಾನಂದ್ ಪ್ರಾರ್ಥಿಸಿದರು. ಸಂದೀಪ್ ಕುಲಾಲ್ ಮುದಲ್ಮೆ ಸ್ವಾಗತಿಸಿದರು. ಸದಾನಂದ ಕುಲಾಲ್ ವರದಿ ವಾಚಿಸಿದರು.ಶೇಷಪ್ಪ ಮಾಸ್ಟರ್ ಪ್ರಾಸ್ತಾವನೆಗೈದರು. ಭಾಸ್ಕರ್ ಕುಲಾಲ್ ವಂದಿಸಿದರು.
ಬಳಿಕ ನಡೆದ ಮನೋರಂಜನಾ ಕಾರ್ಯಕ್ರಮದಲ್ಲಿ ಭಾರತಿ ಐತಪ್ಪ ಕುಲಾಲ್ ಹಾಗೂ ಮಾಲತಿ ದಿನೇಶ್ ರವರ ಆಟಿಕಳಂಜೆ ಹಾಗೂ ಕು.ಶ್ರಾವಣಿಯವರು ನೃತ್ಯ ಪ್ರದರ್ಶಿಸಿದರು.ಭಾರತಿ ಶೇಷಪ್ಪ ಕಾರ್ಯಕ್ರಮ ನಿರೂಪಿಸಿದರು.
ಭಾರತಿ ಶೇಷಪ್ಪ, ಪ್ರಿಯಾ ಸತೀಶ್,ಶೋಭಾ ಭಾಸ್ಕರ್, ಶೋಭಾ ಸದಾನಂದ್, ಕು.ನಿಧಿಷ,ಕೀರ್ತೆಶ್ , ಐತಪ್ಪ ಕುಲಾಲ್, ನೀಲಪ್ಪ ಸಾಲಿಯಾನ್,ಹರೀಶ್ ಪೆರ್ಲ ಬೈಲ್, ದಿನೇಶ್ ಪೆರ್ಲಬೈಲ್ ಗೋಪಾಲ್ ಬೆದ್ರಾಡಿ, ಪ್ರವೀಣ್ ಕುಲಾಲ್ ಸಹಕರಿಸಿದರು.