ಕೈಕಂಬ :ಕೋಟ್ಯಂತರ ಭಾರತೀಯರ ಹಾರೈಕೆ ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿಗಳ ಕಠಿಣ ಪರಿಶ್ರಮ, ಹಾಗೂ ನಮ್ಮ ನೆಚ್ಚಿನ ಪ್ರಧಾನಿ ಮೋದಿಜಿ ಯವರ ಪ್ರೋತ್ಸಾಹ ಹಾಗೂ ಕೋಟ್ಯಂತರ ಭಾರತೀಯರ ಪ್ರಾರ್ಥನೆಯ ಫಲವಾಗಿ ಚಂದ್ರಯಾನ 3ರ ನೌಕೆಯು ಯಶಸ್ವಿಯಾಗಿ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಿದೆ.ದೇಶವೇ ಸಂಭ್ರಮದಲ್ಲಿರುವ ಸಂದರ್ಭ ಗುರುಪುರ ಕೈಕಂಬ ಮಾರ್ಕೆಟ್ ಬಳಿಯ ಮೋದಿ ಪರಿವಾರ್ ರಿಕ್ಷಾ ಚಾಲಕರ ಸಂಘ(ರಿ) ಇವರ ವತಿಯಿಂದ ರಿಕ್ಷಾ ನಿಲ್ದಾಣದ ಆಸುಪಾಸಿನ ಅಂಗಡಿ ಹಾಗೂ ಕಚೇರಿಗಳಿಗೆ ಮತ್ತು ನೆರೆದ ಸಭಿಕರಿಗೆ ಐಸ್ ಕ್ರೀಮ್ ಸಿಹಿತಿಂಡಿ ಹಂಚಿ ಪಟಾಕಿ ಸಿಡಿಸಿದರು. ನಾಸಿಕ್ ಬ್ಯಾಂಡ್ ನ ದ್ವನಿಯೊಂದಿಗೆ ಕುಣಿದು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಬಜಪೆ ಆರಕ್ಷಕ ಠಾಣೆಯ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಮೋದಿ ಪರಿವಾರ್ ರಿಕ್ಷಾ ಚಾಲಕರ ಸಂಘ(ರಿ) ದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
