ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಡ ಶಾಲೆ ಪೊಳಲಿ ೭೭ನೇ ಸ್ವಾತಂತ್ರ‍್ಯ ದಿನಾಚರಣೆ
ಕೈಕಂಬ: ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಡ ಶಾಲೆ ಪೊಳಲಿ ೭೭ನೇ ಸ್ವಾತಂತ್ರ‍್ಯ ದಿನಾಚರಣೆಯು ವಿಜೃಂಭಣೆಯಿಂದ ನಡೆಯಿತು.
ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನದೊಂದಿಗೆ ಪ್ರಾರಂಭವಾದ ಮಾಜಿ ಸೈನಿಕ ಅನಿಶ್ ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಗಿಲ್ ಯುದ್ಧದ ಸಮಯದ ಸೇವೆಯನ್ನು ಮೆಲುಕು ಹಾಕಿದರು.

ಪೊಳಲಿ ವೆಂಕಟೇಶ ನಾವುಡ ಧ್ವಜರೋಹಣಗೈದರು, ಕಾರ್ಯಕ್ರಮದಲ್ಲಿ ಯಶವಂತ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಶೋಭಿ ಕೊಡಲಿ ಕರಿಯಂಗಳ ಗ್ರಾಮ ಪಂಚಾಯಿತಿನ ಪೋಷಕರು ಶಾಲಾ ಹಳೆ ವಿದ್ಯಾರ್ಥಿಗಳು ಊರಿನವರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಜಾನೆಟ್ ಲೋಬೊ ಸ್ವಾಗತಿಸಿದರು. ಶಿಕ್ಷಕಿ ಉಮಾ ವಂದಿಸಿದರು.ಶಾಲಾ ಶಿಕ್ಷಕಿ ರಂಜಿತಾ ನಿರೂಪಿಸಿದರು.
ಕರಿಯಂಗಳ ಗ್ರಾಮ ಪಂಚಾಯತಿ ವತಿಯಿಂದ ಎಸ್ ಆರ್ ಫ್ರೆಂಡ್ಸ್ ಕೊಡಲಿ ಮತ್ತು ರಾಮಕೃಷ್ಣ ತಪೋನದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಸಿಹಿತಿಂಡಿಯನ್ನು ನೀಡಲಾಯಿತು.