ದಿ| ತಿಮ್ಮಪ್ಪ ಪೂಜಾರಿ ಹಾಗೂ ರಾಧಾ ತಿಮ್ಮಪ್ಪ ಪೂಜಾರಿ ಸ್ಮರಣಾರ್ಥ ಬಸ್ಸು ತಂಗುದಾಣ ಉದ್ಘಾಟನೆ
ಪೊಳಲಿ: ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಲ್ಲಿಪಾಡಿ ಗರೋಡಿ ಸಮೀಪದಲ್ಲಿ ದಿ| ತಿಮ್ಮಪ್ಪ ಪೂಜಾರಿ ಹಾಗೂ ರಾಧಾ ತಿಮ್ಮಪ್ಪ ಪೂಜಾರಿ ಸ್ಮರಣಾರ್ಥ ಬಸ್ ತಂಗುದಾಣ ಲೋಕಾರ್ಪಣೆಗೊಂಡಿತು.

ಬಸ್ ನಿಲ್ದಾಣದ ಉದ್ಘಾಟನೆಯನ್ನು ಪಲ್ಲಿಪಾಡಿ ಗರೋಡಿ ಜಯಾನಂದ ಟಿ. ಅಂಚನ್ ನೆರವೇರಿಸಿದರು. ಕರಿಯಂಗಳ ಗ್ರಾಮ ಪಂಚಾಯತ್ ಕರಿಯಂಗಳ ಗ್ರಾಮ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷರಾದ ಚಂದ್ರಹಾಸ ಪಲ್ಲಿಪಾಡಿ ಕರಿಯಂಗಳ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಿ. ರಾಜು ಕೋಟ್ಯಾನ್ ಹಾಗೂ ಪಂಚಾಯತ್ ಸದಸ್ಯರಾದ ಲಕ್ಷ್ಮೀಶ್ ಶೆಟ್ಟಿ ಪಲ್ಲಿಪಾಡಿ, ವೀಣಾ ಆಚಾರ್ಯ, ಕರಿಯಂಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮಾಲಿನಿ, ನಾಗರಾಜ್ ಭಟ್ ಪಲ್ಲಿಪಾಡಿ, ಗರೋಡಿ ಶೇಖರ ಪೂಜಾರಿ ಪ್ರಸಾದ್ ಗರೋಡಿ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು