ಮಾಡ್ಲಮಜಲಿನಲ್ಲಿ “ಬಲೇ ಕೆಸರ್ಡ್ ಗೊಬ್ಬುಗ” ಅಟಿಡೊಂಜಿ ದಿನ
ಬಂಟ್ವಾಳ:ಸಂಸ್ಕಾರದ ಅರಿವು ಮೂಡಿಸುವ ಆಟಿದ ಕೂಟಗಳು ಉತ್ಸವದ ರೀತಿಯಾಗಿ ಆಚರಣೆ ಮಾಡುವುದರಿಂದ ಮೂಢನಂಬಿಕೆಯ ಬದಲು ಮೂಲನಂಬಿಕೆ ಬೆಳೆಸುವಲ್ಲಿ ಸಹಕರಿಸುತ್ತದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದೈವ ನತ೯ಕರಾದ ಲೋಕಯ್ಯ ಸೇರಾ
ಅವರು ಹೇಳಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವ -ಸಹಾಯ ಸಂಘಗಳ ಒಕ್ಕೂಟ ಕಲ್ಲಡ್ಕ ವಲಯ ,ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಕಲ್ಲಡ್ಕ, ಶ್ರೀ ಮಹಾಗಣೇಶ್ ಗೆಳೆಯರ ಬಳಗ ಬಲ್ಲೆಕೊಡಿ ಇವರ ಸಂಯುಕ್ತಾಶ್ರಯದಲ್ಲಿ ಕಲ್ಲಡ್ಕ ಮಾಡ್ಲಮಜಲು ಗದ್ದೆಯಲ್ಲಿ ನಡೆದ “ಬಲೇ ಕೆಸರ್ಡ್ ಗೊಬ್ಬುಗ” ಅಟಿಡು ಒಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿಕರಾದ ಸಂಕಪ್ಪ ಕೊಟ್ಟಾರಿ ಹಾಗೂ ಶ್ರೀಮತಿ ಶಶಿಕಲಾ ಚೆನ್ನೆ ಮನೆ ಆಟವಾಡಿ ಗಮನಸೆಳೆದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯದ ಅಧ್ಯಕ್ಷೆ ತುಳಸಿ ವಹಿಸಿದ್ದರು.
ಕೆಸರುಗದ್ದೆಯ ಮಾಲಕರಾದ ಚಿಕ್ಕು ಪೂಜಾರಿ , ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಎ ರುಕ್ಮಯ ಪೂಜಾರಿ, ವಿಟ್ಲ ತಾಲ್ಲೂಕು ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ನವೀನ್ಚಂದ್ರ,ವಿಟ್ಲ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ,ಕಲ್ಲಡ್ಕ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಭಟ್ಯಪ್ಪ ಶೆಟ್ಟಿ, ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮ, ಪಂಚಾಯತ್ ಸದಸ್ಯರಾದ ಲಿಖಿತ ಆರ್ ಶೆಟ್ಟಿ, ಲೀಲಾವತಿ,ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಂಗೀತ ಶರ್ಮ, ಉದ್ಯಮಿ ಬಾಲಕೃಷ್ಣ ಶೆಟ್ಟಿ, ಶೌರ್ಯ ವಿಪತ್ತು ನಿರ್ವಹಣಾ ತಂಡದ ಅಧ್ಯಕ್ಷರಾದ ಮಾತು ಸಾಲಿಯಾನ್ ಕುದ್ರೆಬೆಟ್ಟು, ಮಹಾಗಣೇಶ್ ಗೆಳೆಯರ ಬಳಗ ಅಧ್ಯಕ್ಷರಾದ ನಾಗೇಶ್ ಕೊಟ್ಟಾರಿ, ಕೃಷ್ಣಪ್ಪ ಪೂಜಾರಿ ಕೇಪುಲಕೋಡಿ, ಕಲ್ಲಡ್ಕ ವಲಯಕ್ಕೆ ಸಂಬಂಧಪಟ್ಟ ಒಕ್ಕೂಟಗಳ ಅಧ್ಯಕ್ಷರುಗಳಾದ ಮಮತಾ, ಶಾಂಭವಿ, ದಯಾನಂದ, ಸೀತಾರಾಮ್, ಮಮತಾ ಮೊದಲಾದವರು ಉಪಸ್ಥಿತರಿದ್ದರು.
ಆಟಿಕೆಲೆಂಜ ಕುಣಿತ,ಕಂಬಳ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದ ಕಲ್ಲಡ್ಕ “ಕೃಷ್ಣಾಪುರದ ಬೊಲ್ಲ’ ಕಂಬಳದ ಕೋಣವನ್ನು ಕ್ರೀಡಾಕೂಟದ ಗದ್ದೆಗೆ ಇಳಿಸಿದ ಕೋಣದ ಮಾಲಕರಾದ ಪರಮೇಶ್ವರ ಸಾಲಿಯಾನ್ ರವರನ್ನು ಸನ್ಮಾನಿಸಲಾಯಿತು.ಕ್ರೀಡಾಕೂಟದ ಗದ್ದೆಗೆ ಹಾಲೆರೆದು, ವೀಳ್ಯದೆಲೆ ಅಡಿಕೆ ಗದ್ದೆಗೆ ಸಮರ್ಪಿಸಿ, ತೆಂಗಿನಕಾಯಿ ಒಡೆದು ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಯೋಜನೆಯ ಸದಸ್ಯರುಗಳು ಆಟಿ ತಿಂಗಳಲ್ಲಿ ಮಾಡುವಂತ ವಿವಿಧ ತರಹದ ತಿಂಡಿ ತಿನಿಸುಗಳನ್ನು ತಮ್ಮ ತಮ್ಮ ಮನೆಯಲ್ಲಿ ತಯಾರಿಸಿ ತಂದು ಪರಸ್ಪರ ಹಂಚಿಕೊಂಡು ಸಂಭವಿಸಿದರು.ಬೋಳಂತೂರು ಒಕ್ಕೂಟದ ಅಧ್ಯಕ್ಷರಾದ ಸೀತಾ ಪಾರ್ದನ ಮೂಲಕ ಪ್ರಾರ್ಥಿಸಿದರು, ಮಾಮೇಶ್ವರ ಒಕ್ಕೂಟದ ಅಧ್ಯಕ್ಷ ಹರೀಶ್ ಸ್ವಾಗತಿಸಿ, ಕಲ್ಲಡ್ಕ ವಲಯದ ಮೇಲ್ವಿಚಾರಕಿ ಸುಗುಣ ಶೆಟ್ಟಿ ಪ್ರಸ್ತಾವನೆಗೈದರು, ಮಹಾ ಗಣೇಶ್ ಗೆಳೆಯರ ಬಳಗದ ಗೌರವ ಸದಸ್ಯ ಶೇಖರ್ ಕೊಟ್ಟಾರಿ ವಂದಿಸಿದರು.
ಗೋಳ್ತಮಜಲ ಗ್ರಾ. ಪಂ. ಸದಸ್ಯ ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಕೆಸರು ಗದ್ದೆಯಲ್ಲಿ ವಿವಿಧ ರೀತಿಯ ಕ್ರೀಡಾಕೂಟಗಳು ಜರಗಿತು.
ಮಿಸ್ಟರ್ ಮದಿಮಾಯೇ ಚಲನಚಿತ್ರ ತಂಡ ಭೇಟಿ ನೀಡಿ ಚಲನಚಿತ್ರದ ಟೈಟಲ್ ಸಾಂಗ್ ಹಾಡಿ ಕ್ರೀಡಾಭಿಮಾನಿಗಳನ್ನು ರಂಜಿಸಿದರು. ಸಂಜೆ ನಡೆದ ಸಮರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.