ಮಳಲಿ ಸೂರ್ಯನಾರಾಯಣ ದೇಗುಲ ಜಿರ್ಣೋದ್ಧಾರ ಸಮಾಲೋಚನ ಸಭೆ
ಕೈಕಂಬ: ಗಂಜಿಮಠ ವ್ಯಾಪ್ತಿಯ ಮಳಲಿ(ಮಣೇಲ್) ದೇವರಗುಡ್ಡೆ ಪುರಾತನ ದೇವಸ್ಥಾನದ ಐತಿಹ್ಯ ಕಂಡು ಬಂದ ಸ್ಥಳದಲ್ಲಿ ಅಷ್ಟಮಂಗಲ ಪ್ರಶ್ನೆಯಂತೆ ಶ್ರೀ ಸೂ ರ್ಯನಾರಾಯಣ ದೇವರ ಸಾನಿಧ್ಯದ ಇರುವಿಕೆ ಪತ್ತೆಯಾಗಿದ್ದು, ಈ ದೇವಸ್ಥಾನದ ಜೀರ್ಣೋದ್ಧಾರ ನಡೆಸಲು ತೆಂಕುಳಿಪಾಡಿ, ಮೊಗರು ಹಾಗೂ ಬಡಗುಳಿ ಪಾಡಿ ಗ್ರಾಮದ ಗ್ರಾಮಸ್ಥರು ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ದೇಗುಲ ನಿರ್ಮಾಣದ ಜೀರ್ಣೋದ್ಧಾರ ಕಾರ್ಯ ನಿಮಿತ್ತ ಮಳಲಿ ಶ್ರೀರಾಮಾಂಜನೇಯ ಭಜನಾ ಮಂದಿರದಲ್ಲಿ ತೆಂಕುಳಿಪಾಡಿ, ಬಡಗುಳಿಪಾಡಿ ಹಾಗೂ ಮೊಗರು ಗ್ರಾಮಸ್ಥರೊಂದಿಗೆ ಉಳಿಪಾಡಿಗುತ್ತು ಉದಯಕುಮಾರ್ ಆಳ್ವ ಹಾಗೂ ದೇವಸ್ಥಾನಕ್ಕೆ ಸ್ಥಳದಾನ ನೀಡಿದ ದಾನಿಗಳ ನೇತೃತ್ವದಲ್ಲಿ ಸಮಾಲೋಚನ ಸಭೆ ನಡೆಸಿ ದೇವಸ್ಥಾನವನ್ನು ಆದಷ್ಟು ಬೇಗ ನಿರ್ಮಿಸುವ ಕುರಿತು ಸಭೆ ನಡೆಸಲಾಯಿತು.
ಭಗವಾನ್ ಶ್ರೀರಾಮ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಭೆ ಆರಂಭಗೊAಡಿತು.
ದೇಗುಲದ ಜೀರ್ಣೋದ್ಧಾರ ಪೂರ್ವಭಾವಿಯಾಗಿ ದೋಷ ಕಂಡು ಬರದೆ ದೇಗುಲ ನಿರ್ಮಾಣಕಾರ್ಯ ನಿರ್ವಿಘ್ನವಾಗಿ ಸಾಗಲು ದೋಷ ಪರಿಹಾರ ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ.
ಆಗಸ್ಟ್ ೩೦ರಂದು ಗಣಹೋಮ, ಪ್ರಶ್ನಾ ಚಿಂತನೆ ಹಾಗೂ ಮರುದಿನ ಆ.೩೧ರಂದು ಮೃತ್ಯುಂಜಯ ಹೋಮ ನಡೆಸಲಾಗುವುದು. ಇದಕ್ಕೆ ಧನಕ್ರೋಡೀಕರಣಕ್ಕಾಗಿ ಮೂರು ಗ್ರಾಮದ ಪ್ರತಿ ಮನೆಗಳಿಂದ ಧನ ಸಂಗ್ರಹ ನಡೆಸಲೆಂದು ಇದಕ್ಕಾಗಿ ತಂಡವೊAದನ್ನು ರಚಿಸಲು ತೀರ್ಮಾನಿಸಲಾಗಿದೆ.
ಉಳಿಪಾಡಿಗುತ್ತು ಉದಯಕುಮಾರ್ ಆಳ್ವರು ಮಾಹಿತಿ ನೀಡಿ, ದೇಗುಲದ ಇರುವಿಕೆ ಕಂಡು ಬಂದ ಸ್ಥಳದಲ್ಲಿ ತಾಂಬೂಲ ಪ್ರಶ್ನೆ ಹಾಗೂ ಅಷ್ಠ ಮಂಗಳ ನಡೆಸಲಾಗಿದ್ದು, ಇಲ್ಲಿ ಸೂರ್ಯನಾರಾಯಣ ದೇವರು, ಗಣಪತಿ, ದುರ್ಗಾ, ನಾಗ ದೇವರು ಸಹಿತ ಹಲವು ಶಕ್ತಿಗಳ ಇರುವಿಕೆ ಸ್ಪಷ್ಟವಾಗಿದ್ದು, ಇಲ್ಲಿನ ದೇಗುಲ ರಾಜಮಹಾರಾಜರಿಂದ ಪೂಜಿಸಲ್ಪಡುತ್ತಿತ್ತು. ದೇವಸ್ಥಾನ ನಿರ್ಮಾಣ ಕಾರ್ಯ ಮೂರು ವರ್ಷಗಳ ಮುಂಚೆಯೇ ನಡೆಯಬೇಕಿತ್ತು. ಆದರೆ ಮಹಾಮಾರಿ ಕೊರೊನಾದಿಂದಾಗಿ ವಿಳಂಬಗೊAಡಿದೆ. ಇದೀಗ ಮಹೂರ್ತ ಕೂಡಿ ಬಂದಿದ್ದು, ಎಲ್ಲರೂ ಜೊತೆಯಾಗಿ ದೇವರ ಸೇವೆ ಮಾಡೋಣ. ಇದಕ್ಕಾಗಿ ಹಣದ ಕ್ರೋಡೀಕರಣ ನಡೆಯಬೇಕಿದೆ. ಕೋಟ್ಯಂತರ ರೂಪಾಯಿ ವೆಚ್ಚ ತಗಲುವ ಅಂದಾಜಿದೆ.
ಸಮಿತಿಯ ಸಂಚಾಲಕರಾದ ಗಂಜಿಮಠ ಭಾಸ್ಕರ ಭಟ್ ಮಾತಾಡಿ, ಆರಂಭದಲ್ಲಿ ಗರ್ಭಗುಡಿಗೆ ಪ್ರಧಾನ್ಯತೆ ನೀಡಿ ನಿತ್ಯಪೂಜೆ ನಡೆಯುವಂತೆ ಮಾಡೋಣ. ಇದಕ್ಕಾಗಿ ಸಾಕಷ್ಟು ಹಣದ ಅವಶ್ಯಕತೆ ಇದ್ದು, ಅಂದಾಜುಪಟ್ಟಿ ತಯಾರಿಸಬೇಕಿದೆ. ಸುತ್ತುಪೌಳಿ ಇತ್ಯಾದಿಗಳನ್ನು ದೇಗುಲನಿರ್ಮಾಣ ಆದ ಬಳಿಕ ನಿರ್ಧರಿಸೋಣ ಎಂದು ನುಡಿದರು.
ದೇವಸ್ಥಾನದ ಜೀರ್ಣೋದ್ಧಾರ ಕುರಿತಂತೆ ಗ್ರಾಮಸ್ಥರು ಹಲವು ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಉದ್ಯಮಿ ಚಂದ್ರಹಾಸ ನಾರಳ, ನಿವೃತ್ತ ಶಿಕ್ಷಕ ಜಿ.ಸುಬ್ರಾಯ ಭಟ್, ನಿವೃತ್ತ ಶಿಕ್ಷಕ ಅಣ್ಣಯ್ಯ ಮಾಸ್ಟರ್, ಸುರೇಶ್ ನಾಯಕ್ ಉಳಿಪಾಡಿಗುತ್ತು , ಪ್ರೇಮಚಂದ್ರ ನಾಯಕ್, ಉಪನ್ಯಾಸಕ ಅಕ್ಷಯ ಕುಮಾರ್ ಮಣೇಲ್, ಸುಧಾಕರ ಟೈಲರ್, ಜಯಾನಂದ ನಾಯ್ಕ್ ಮೊಗರು, ಸದಾಶಿವ ಕರ್ಕೇರಾ ಕಾಜಿಲ, ಬೂಬ ಪೂಜಾರಿ, ಹರೀಶ್ ಮಟ್ಟಿ ಮತ್ತಿತರರು ಇದ್ದರು. ಶಿವರಾಜ್ ನಾರಳ ನಿರೂಪಿಸಿದರು. ಪುರುಷೋತ್ತಮ ಲೆಕ್ಕಪತ್ರಮಂಡಿಸಿದರು.