ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸಫರಾ ಮದಕ ಉಪಾಧ್ಯಕ್ಷರಾಗಿ ದಾವೂದ್ ಬಂಗ್ಲೆಗುಡ್ಡೆ ಆಯ್ಕೆ
ಕೈಕಂಬ : ಗುರುಪುರ ಗ್ರಾಮ ಪಂಚಾಯತ್‌ನಲ್ಲಿ ಆ.೯ ರಂದು ಬುಧವಾರ ನಡೆದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಸ್‌ಡಿಪಿಐ ಬೆಂಬಲಿತ ಸಫರಾ ಮದಕ ಮತ್ತು ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ದಾವೂದ್ ಬಂಗ್ಲೆಗುಡ್ಡೆ ಅವರು ತಲಾ ಒಂದು ಮತದ ಅಂತರದಿಂದ ಚುನಾಯಿತರಾದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಮುಂದಿನ ಎರಡೂವರೆ ವರ್ಷ ಅಧಿಕಾರಾವಧಿ ನಿಗದಿಪಡಿಸಲಾಗಿದೆ.

ಒಟ್ಟು ೨೮ ಸದಸ್ಯರ ಬಲದ ಪಂಚಾಯತ್‌ನಲ್ಲಿ ಕಾಂಗ್ರೆಸ್ ಬೆಂಬಲಿತ ೯, ಎಸ್‌ಡಿಪಿಐ ಬೆಂಬಲಿತ ೧೦, ಬಿಜೆಪಿ ಬೆಂಬಲಿತ ೮ ಮತ್ತು ಜೆಡಿಎಸ್ ಬೆಂಬಲಿತ ಒಬ್ಬರು ಸದಸ್ಯರಿದ್ದು, ಬಿಜೆಪಿ ಬೆಂಬಲಿತ ಎಲ್ಲ ೮ ಮಂದಿ ಸದಸ್ಯರು ಮತದಾನಕ್ಕೆ ಗೈರಾಗಿದ್ದರು. ಹಾಗಾಗಿ ಒಟ್ಟು ೨೦ ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸಫರಾ ಅವರಿಗೆ ಎಸ್‌ಡಿಪಿಐಯ ೧೦, ಜೆಡಿಎಸ್‌ನ ಒಬ್ಬರ ಸಹಿತ ಒಟ್ಟು ೧೧ ಮತಗಳ ಬಿದ್ದಿದ್ದರೆ, ಉಪಾಧ್ಯಕ್ಷ ಸ್ಥಾನದ ದಾವೂದ್ ಅವರಿಗೆ ಎಸ್‌ಡಿಪಿಐನ ೧೦, ಮತ್ತು ಜೆಡಿಎಸ್‌ನ ಒಂದು ಮತ ಬಿದ್ದಿದೆ.
ಅಧ್ಯಕ್ಷ ಸ್ಥಾನಕ್ಕೆ ಸಫರಾ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶೋಭಾ ಎ, ಉಪಾಧ್ಯಕ್ಷ ಸ್ಥಾನಕ್ಕೆ ದಾವೂದ್, ಬಿಜೆಪಿ ಬೆಂಬಲಿತ ಶಶಿಕಲಾ, ಜಿ. ಎಂ. ಉದಯ ಭಟ್ ಮತ್ತು ರಾಜೇಶ್ ಸುವರ್ಣ ಮತ್ತು ಕಾಂಗ್ರೆಸ್ ಬೆಂಬಲಿತ ಎ. ಕೆ. ಅಶ್ರಫ್ ಸ್ಪರ್ಧಿಸಿದ್ದರು. ಬಿಜೆಪಿ ಸದಸ್ಯರ ಗೈರಿನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಫರಾ ಅವರು ಶೋಭಾರ ಎದುರು ೧೧-೯ ಮತಗಳ ಅಂತರದಿAದ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ದಾವೂದ್ ಅವರು ಅಶ್ರಫ್ ಅವರೆದುರು ೧೧-೯ ಮತಗಳ ಅಂತರದಿAದ ಆಯ್ಕೆಯಾದರು.
ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನ್ಹೊ ಚುನಾವಣಾಧಿಕಾರಿಯಾಗಿದ್ದರು. ಪಿಡಿಒ ಪಂಕಜಾ ಶೆಟ್ಟಿ, ಕಾರ್ಯದರ್ಶಿ ಅಶೋಕ್, ಸಿಬ್ಬಂದಿ ಅನಿತಾ, ಸುದರ್ಶನ್ ಮತ್ತು ಸೌಮ್ಯ ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು. ಹೊಸದಾಗಿ ಆಯ್ಕೆಯಾದ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರಿಗೆ ಮಾಜಿ ಅಧ್ಯಕ್ಷ ಯಶವಂತ ಶೆಟ್ಟಿ ಮತ್ತು ಉಪಾಧ್ಯಕ್ಷೆ ದಿಲ್ಶಾದ್ ಅಭಿನಂದನೆ ಸಲ್ಲಿಸಿದರು.ರಂದು