ವರಕೋಡಿ ಆ.೧೩ರಂದು ಕೆಸರ್ಡ್ ಒಂಜಿ ದಿನ ಕೆಸರುಗದ್ದೆ ಕ್ರೀಡಾಕೂಟ
ಕೈಕಂಬ: ಯಕ್ಷಕಲಾ ಸಂಘ ರಿ ಯಕ್ಷಧಾಮ ವರಕೋಡಿ ಬಡಗಬೆಳ್ಳೂರು ಇದರ ಆಶ್ರಯದಲ್ಲಿ ಆ.೧೩ರಂದು ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ವರಕೋಡಿ ಬಾಕಿಮಾರು ಗದ್ದೆಯಲ್ಲಿ ಕೆಸರ್ಡ್ ಒಂಜಿ ದಿನ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ. ವಿಶೇಷವಾಗಿ ಬಾಲಕ ಬಾಲಕಿಯರಿಗೆ ಯುವಕ ಯುವತಿಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ ಮಹಿಳೆಯರಿಗೆ ತ್ರೋಬಾಲ್ ಪಂದ್ಯಾಟ ಕೆಸರುಗದ್ದೆಯಲ್ಲಿ ನಡೆಯಲಿದೆ.
ಕ್ರೀಡಾ ಪ್ರೇಮಿಗಳು ಮತ್ತು ಸ್ಪರ್ಧಿ ಗಳಿಗೆ ಮಧ್ಯಾಹ್ನ ಭೋಜನದ ವ್ಯವಸ್ಥೆ ಇದೆ ಸಂಜೆ ಸಮಾರೋಪ ಸಮಾರಂಭ ಗಣ್ಯಾತಿಗಣ್ಯರ ಸಮಕ್ಷಮದಲ್ಲಿ ಬಹುಮಾನ ವಿತರಣೆ ಸಮಾರಂಭವು ಜರಗಲಿದೆ. ಆ.೧೫ ರಂದು ಮಂಗಳವಾರ ಯಕ್ಷಧಾಮದ ವಠಾರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ ಧ್ವಜಾರೋಹಣ ನೆರವೇರಿಸುವರು ವರಕೋಡಿ ಮಹಾಬಲ ಶೆಟ್ಟಿ ( ಪೃಗತಿ ಪರ ಕೃಷಿಕರು) ಯಕ್ಷಕಲಾ ಸಂಘ ವರಕೋಡಿ ಇದರ ಪ್ರಕಟನೆ ತಿಳಿಸಿದೆ.
ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಯಕ್ಷಕಲಾ ಸಂಘ ವರಕೋಡಿ ಬಡಗಬೆಳ್ಳೂರು